ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಅನ್ನದಾನದ ಸೇವಾಕರ್ತರಾದ ಲಕ್ಷ್ಮೀ ಕುಷ್ಟು ಪೂಜಾರಿ ಮತ್ತು ಮಕ್ಕಳು ಅಳ್ವೆಗದ್ದೆ ಇವರನ್ನು ಶಾರದೋತ್ಸವ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು ಹಾಗೂ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ನಾಗಯ್ಯ ಶೆಟ್ಟಿ, ಶಾರದೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ,ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಶಿರೂರು,ಕೋಶಾಧಿಕಾರಿದಾಮೋಧರ ಶೆಟ್ಟಿ,ಸದಸ್ಯರಾದ ಅಶೋಕ ಕುಮಾರ್ ಶೆಟ್ಟಿ ಕಾರಿಕಟ್ಟೆ,ಮಾಧವ ಬಿಲ್ಲವ ಕಾಳನಮನೆ,ಸಿ.ಎನ್.ಬಿಲ್ಲವ,ಶಂಕರ ಬಿಲ್ಲವ,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಕಾರ್ಯದರ್ಶಿ ನಂದ ಕುಮಾರ್,ಮಹಾದೇವ ಬಿಲ್ಲವ,ರವಿದಾಸ್ ಮೊಗೇರ್,ಕಿಶೋರ್ ಕುಮಾರ್ ಹಾಗೂ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಾಮ ಪಟ್ಟಾಭಿಷೆಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಗುರುವಾರ ಸಂಜೆ 04 ಕ್ಕೆ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಪೂಜೆ,ಮಹಿಳಾ ಹಾಗೂ ಪುರುಷ ತಂಡಗಳಿಂದ ಭಜನಾ ತಂಡಗಳ ಆಕರ್ಷಣ ಮೆರವಣಿಗೆ ಬಳಿಕ ದೇವಸ್ಥಾನದ ಎದುರಿನ ಕೆರೆಯಲ್ಲಿ ವಿಗ್ರಹದ ಜಲಸ್ಥಂಭನ ನಡೆಯಲಿದೆ.