ಬೈಂದೂರು; ತಾಲೂಕು ಕಛೇರಿಗೆ ಬಂದು ಒಂದು ಅರ್ಜಿ ನೀಡಲು ಹೆದರುತ್ತಿದ್ದ ರೈತ ಇಂದು ಆಡಳಿತ ಸೌಧದ ಎದುರುಗಡೆ ನಿಂತು ನ್ಯಾಯಕ್ಕಾಗಿ ಹಸಿರುಶಾಲು ಬೀಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ ಅಂದರೆ ಅದು ರೈತರ ನೋವಿನ ಶಕ್ತಿ.ಹಿಂದಿನಿಂದಲೂ ಕರಾವಳಿ ಇತರ ವಿಷಯದಲ್ಲಿ ಸಂಘಟನೆ ಕಂಡಿದೆ.ಆದರೆ ರೈತರ ಸಂಘಟನೆ ಇದೆ ಮೊದಲು ಹತ್ತು ದಿನದಿಂದ ರೈತರು ಧರಣಿ ನಡೆಸುತ್ತಿದ್ದು ಜಿಲ್ಲಾಡಳಿತ ತಕ್ಷಣ ಸ್ಪಂಧಿಸಬೇಕಿದೆ.ರಾಜಕೀಯ ನಾಯಕರು ಪಕ್ಷಬೇದ ಮರೆದು ಕೈಜೋಡಿಸಬೇಕು ರಾಜ್ಯಕ್ಕೆ ಬೈಂದೂರು ರೈತರ ಶಕ್ತಿ ತೋರಿಸುವ ಸಮಯ ಇದಾಗಿದೆ ಎಂದು ಹಿಂದೂ ಮುಖಂಡ ಯುವ ವಕೀಲ ಆಕಾಶ ಪೂಜಾರಿ ಹೇಳಿದರು ಅವರು ರೈತ ಸಂಘದ ದೀಪಕ್ ಕುಮಾರ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ ಹತ್ತನೆ ದಿನದ ಪ್ರಧಾನ ಭಾಷಣ ಮಾಡಿ ರೈತರ ಹೋರಾಟದಲ್ಲಿ ರಾಜಕೀಯ ಮಾಡುವ ಬದಲು ರೈತರು ಪ್ರತಿದಿನ ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ ಪಪಂ ವ್ಯಾಪ್ತಿ ಬಂದ ಬಳಿಕ ಕಷ್ಟ ಪಟ್ಡು ದುಡಿದು ಮನೆ ಕಟ್ಟಲು ಮುಂದಾದರೆ ಹತ್ರಾರು ನಿಯಮ
ರೇಷನ್ ಕಾರ್ಡ್ ಸಮಸ್ಯೆ ರಸ್ತೆ ಸಮಸ್ಯೆ ಬೆಳೆ ಹಾನಿ ಸೇರಿದಂತೆ ಹಲವು ಸಮಸ್ಯೆ ಇದೆ ಅದರ ಬಗ್ಗೆ ರಾಜ್ಯದಲ್ಲಿ ಸಂಭಂದ ಪಟ್ಟ ಸದನದಲ್ಲಿ ಧ್ವನಿ ಆಗಬೇಕು ರೈತರ ಹೋರಾಟಕ್ಕೆ ಮೊದಲು ಬೆಂಬಲ ನೀಡಿ ಕೈ ಜೋಡಿಸಬೇಕು ಆಮೇಲೆ ರಾಜಕೀಯ ಮಾಡಬೇಕು ರೈತ ನಾಯಕ ದೀಪಕ್  ಕುಮಾರ ಶೆಟ್ಟಿಯವರ ಹೋರಾಟ ಜಯ ಕಾಣಬೇಕು ಎಂದರು.

ಈ ಸಂಧರ್ಭದಲ್ಲಿ ವೀರಭದ್ರ ಗಾಣಿಗ,ಅರುಣ್ ಕುಮಾರ ಶಿರೂರು, ನಾಗಪ್ಪ ಮರಾಠಿ ಹೊಸೂರು, ಚಂದ್ರ ಗಂಗಾನಾಡು, ಗಣಪ ಗಂಗಾನಾಡು ಮುಂತಾದವರು ಹಾಜರಿದ್ದರು. ಎಳಜಿತ್ ಕೆಕ್ಜೋಡು ಭಾಗದ ರೈತರು ಇಂದಿನ ಧರಣಿ ನೇತ್ರತ್ವ. ವಹಿಸಿದ್ದರು.

Leave a Reply

Your email address will not be published. Required fields are marked *

twelve − 5 =