ಶಿರೂರು: ದೇವರ ಭಯ ಜ್ಞಾನದ ಆರಂಭ ಎಂಬಂತೆ ಧಾರ್ಮಿಕ ಕಾರ್ಯಗಳು ಊರಿಗೆ ಶ್ರೇಯಸ್ಸನ್ನು ನೀಡುತ್ತದೆ.ಹಬ್ಬಗಳು,ಆಚರಣೆಗಳು ಪರಂಪರಾಗತ ಅರ್ಥವನ್ನು ಹೊಂದಿದೆ.ಪ್ರತಿ ಆಚರಣೆಗಳ ಹಿಂದೆಯೂ ಒಂದೊಂದು ಅರ್ಥವಿದೆ.ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳು,ಆಚರಣೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ.ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ ಅರಿವು ಅಗತ್ಯ. ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯಿದ್ದಾಗ ಮಾತ್ರ ಊರಿನ ಅಭಿವ್ರದ್ದಿ ಸಾಧ್ಯ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಹೇಳಿದರು ಅವರು ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾದ ಸಿ.ಎನ್.ಬಿಲ್ಲವ ರವರನ್ನು ಶಾರದೋತ್ಸವ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ನಾಗಯ್ಯ ಶೆಟ್ಟಿ, ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಶಿರೂರು,ಸದಸ್ಯರಾದ ಅಶೋಕ ಕುಮಾರ್ ಶೆಟ್ಟಿ ಕಾರಿಕಟ್ಟೆ,ಮಾಧವ ಬಿಲ್ಲವ ಕಾಳನಮನೆ,ಸಿ.ಎನ್.ಬಿಲ್ಲವ,ಶಂಕರ ಬಿಲ್ಲವ,ಕಾರ್ಯದರ್ಶಿ ನಂದ ಕುಮಾರ್,ದಾಮೋಧರ ಶೆಟ್ಟಿ, ಮಧುಕರ ಶೆಟ್ಟಿ,ಮಹಾದೇವ ಬಿಲ್ಲವ,ರಾಜೀವ ಶೆಟ್ಟಿ,ಕಿಶೋರ್ ಕುಮಾರ್ ಹಾಗೂ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

 

 

 

 

 

 

Leave a Reply

Your email address will not be published. Required fields are marked *

2 × 3 =