ಬೈಂದೂರು; ಅನ್ನ ತಿನ್ನುವ ಪ್ರತಿಯೊಬ್ವರಿಗೂ ರೈತರ ಕಷ್ಟದ ಅರಿವಿದೆ.ರೈತ ಮುಖಂಡ ದೀಪಕ್ ಕುಮಾರ ಶೆಟ್ಟಿ ಬೈಂದೂರಿನ ರೈತ ಹೋರಾಟಗಾರ.ರೈತರ ಹೋರಾಟದಲ್ಲಿ ಯಾವುದೆ ರಾಜಕೀಯ ಇಲ್ಲ ಇದರಲ್ಲಿ ರಾಜಕೀಯ ಲಾಭ ಹುಡುಕುವ ಮನಸ್ಥಿತಿ ಇರುವವರು ರೈತ ವಿರೋಧಿಗಳು.ನಾವೆಲ್ಲರು ರೈತರ ಈ ಹೋರಾಟಕ್ಜೆ ಸೇರಿಕೊಂಡು ಅವರಿಗೆ ಇನ್ಬಷ್ಟು ಶಕ್ತಿ ನೀಡಬೇಕು ಎಂದು ದಿವಾಕರ ಶೆಟ್ಟಿ ನೆಲ್ಯಾಡಿ ಹೇಳಿದರು ಅವರು ರೈತ ಸಂಘ ಬೈಂದೂರು ಇದರ ನೇತ್ರತ್ವದ ಅನಿಧಿ೯ಷ್ಟಾವದಿ ಧರಣಿಯ ಎಳನೇ ದಿನದ ಪ್ರಧಾನ ಭಾಷಣದಲ್ಲಿ ಮಾತನಾಡಿ ಇಂತಹ ಅತ್ಯುತ್ತಮ ಹೋರಾಟ ಜಿಲ್ಲೆಗೆ ಮಾದರಿಯಾಗಿದೆ.ಇದರಲ್ಲಿ ಯಾವ ರಾಜಕೀಯ ಇಲ್ಲ .ನಿಜಕ್ಕೂ ಹಳ್ಳಿಭಾಗದ ಜನರಿಗೆ ಅನ್ಯಾಯವಾಗಿದೆ ಅವರ ಹೋರಾಟ ನ್ಯಾಯಯುತವಾಗಿದೆ ಎಂದರು

ಅಪಪ್ರಚಾರ ಮಾಡುವವರಿಗೆ ತಪರಾಕಿ: ಒಂದು ಕಡೆ ರೈತರು ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ ಕೆಲವರು ರಾಜಕೀಯ ಲಾಭಕ್ಕೆ ಫೇಸ್‌ಬುಕ್ ನಲ್ಲಿ ಇಲ್ಲಿನ ವಿಷಯಗಳನ್ನು ತಿರುಚಿ ತಪ್ಪು ಸಂದೇಶ ನೀಡುತ್ತಿದ್ದಾರೆ.ಇಂತಹ ಕೆಟ್ಟ ಬುದ್ದಿ ಉಪಯೋಗಿಸುವ ಬದಲು ಸಾದ್ಯವಾದರೆ ರೈತರ ಹೋರಾಟದಲ್ಲಿ ಬಂದು ಭಾಗವಹಿಸಿ ಈ ತರಹ ದಾರಿ ತಪ್ಪಿಸುವ ಪ್ರಯತ್ನ ಯಾರಿಗೂ ಶೋಭೆಯಲ್ಲ.ಈ ವಿಷಯದಲ್ಕಿ ಕಾಂಗ್ರೇಸ್ ಬಿಜೆಪಿ ಎನು ಇಲ್ಲ ಎನಿದ್ದರು ರೈತ ಸಂಘದ ಅಡಿಯಲ್ಲಿ ನಮ್ಮೆಲ್ಲರ ಹೋರಾಟ ಎಂದರು.

ಈ ಸಂಧರ್ಭದಲ್ಲಿ ಸುಧಾಕರ ಶೆಟ್ಟಿ ನೆಲ್ಯಾಡಿ,ಪ್ರಶಾಂತ್ ಪಡುವರಿ,ಗೌರೀಶ್ ಉಪ್ಪುಂದ,ಮಹಾದೇವ ಪೂಜಾರಿ ಕಿಸ್ಮತ್ತಿ,ಕೇಶವ ಪೂಜಾರಿ ಅಂತಾರ್,ರಾಜೇಶ್ ಬೈಂದೂರು,ನಾಗಪ್ಪ ಮರಾಠಿ ಹೊಸೂರು ಮುಂತಾದವರು ಹಾಜರಿದ್ದರು. ತೂದಲ್ಳಿ ಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವೀರಭದ್ರ ಗಾಣಿಗ ಸ್ವಾಗತಿಸಿದರು.ಅರುಣ ಕುಮರ ಶಿರೂರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

3 × three =