ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ 22ನೇ ವರ್ಷದ ಶಾರದೋತ್ಸವ ವಿಧಾತ್ರಿ -2025 ಕಾರ್ಯಕ್ರಮ ಅ.01 ಹಾಗೂ 02 ರ ವರೆಗೆ ಗೌರಿ ರಂಗ ಮಂಟಪ ಆಲಂದೂರಿನಲ್ಲಿ ನಡೆಯಲಿದೆ.
ಅ.01 ರಂದು ಬೆಳಿಗ್ಗೆ ರಂದು ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ಮಹಾಪೂಜೆ,ಭಜನಾ ಕಾರ್ಯಕ್ರಮ,ಮದ್ಯಾಹ್ನ ಅನ್ನಪ್ರಸಾದ ವಿತರಣೆ. ಸಂಜೆ ನವದುರ್ಗೆಯರ -ವೇಷಭೂಷಣ ಸ್ಪರ್ಧೆ, ರಾತ್ರಿ 7:30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ಹಾಗೂ ಸಮ್ಮಾನ ಕಾರ್ಯಕ್ರಮ.ರಾತ್ರಿ 9 ಗಂಟೆಗೆ ಕಲಾಚಿಗುರು ಕಲಾ ತಂಡ ಇವರಿಂದ ನಾಳಿಗ್ ಹೇಳ್ತಿ ನಾಟಕ ಪ್ರದರ್ಶನಗೊಳ್ಳಲಿದೆ.
ಅ.02 ರಂದು ಬೆಳಿಗ್ಗೆ ವಿಜಯದಶಮಿಯ ಅಂಗವಾಗಿ ದುರ್ಗಾಹೋಮ, ಪ್ರತಿಭಾ ಸೌರಭ,ನೃತ್ಯ ವೈವಿದ್ಯ,ಸಭಾ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಶ್ರೀದೇವಿಯ ಭವ್ಯ ಪುರವೆರವಣಿಗೆ ಬಳಿಕ ಬಿಂಬದ ಜಲಸ್ಥಂಭನ ನಡೆಯಲಿದೆ ಎಂದು ಮಾನಸ ಮಿತ್ರ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.