ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.29ರಿಂದ  ಸೆ.02ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ಅ.29ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು  ನಡೆಯಲಿದೆ.ಸಂಜೆ  6 ಗಂಟೆಗೆ ಕ್ಕೆ ವೆಂಕಟೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ,ರಾತ್ರಿ ಪೂಜೆ,ಪ್ರಸಾದ ವಿತರಣೆ ರಾತ್ರಿ 8 ಗಂಟೆಗೆ ಪಿ.ಎಂ.ಶ್ರೀ  ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ನಡೆಯಲಿದೆ.

ಅ.30ರಂದು ಬೆಳಿಗ್ಗೆ ದುರ್ಗಾಹೋಮ, ಮದ್ಯಾಹ್ನ ಪೂಜೆ ,ರಾತ್ರಿ 7ಕ್ಕೆ ರಂಗಪೂಜೆ ನಡೆಯಲಿದೆ ಬಳಿಕ ಆಹ್ವಾನಿತ ಭಜನಾ ತಂಡಗಳಿಂದ ಕುಣಿತಾ ಭಜನಾ ಕಾರ್ಯಕ್ರಮ ನಡೆಯಲಿದೆ.

ಅ.01ರಂದು ಬೆಳಿಗ್ಗೆ ಚಂಡಿಕಾಹೋಮ,ಮದ್ಯಾಹ್ನ ಅನ್ನಸಂತರ್ಪಣೆ  ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಾಮ ಪಟ್ಟಾಭಿಷೆಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅ.02 ರಂದು ಸಂಜೆ 4ಕ್ಕೆ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಪೂಜೆ,ಮಹಿಳಾ ಹಾಗೂ ಪುರುಷ ತಂಡಗಳಿಂದ ಭಜನಾ ತಂಡಗಳ ಆಕರ್ಷಣ ಮೆರವಣಿಗೆ ಬಳಿಕ ದೇವಸ್ಥಾನದ ಎದುರಿನ ಕೆರೆಯಲ್ಲಿ ವಿಗ್ರಹದ ಜಲಸ್ಥಂಭನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

14 + 19 =