ಬೈಂದೂರು; ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು,ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕೆಸರುಗದ್ದೆಯಲ್ಲೊಂದು ದಿನ ಗಮ್ಮತ್ತ್ -2025 ಕಾರ್ಯಕ್ರಮ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.
ಮಾಜಿ ಸಂಸದ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಕೆಸರುಗದ್ದೆಯಲ್ಲೊಂದು ದಿನ ಗಮ್ಮತ್ತ್ -2025 ಕಾರ್ಯಕ್ರಮವನ್ನು ಸಂಪ್ರದಾಯಿಕ ಆಚರಣೆಯ ಭತ್ತಕುಟ್ಟುವ ಕಲ್ಲಿಗೆ ಭತ್ತ ಸುರಿಯುವುದು ಹಾಗೂ ಬೀಸುವ ಕಲ್ಲಿಗೆ ದಾನ್ಯ ಸುರಿದು ಬೀಸುವ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ನೆಲ ಜಲ ಸಂಸ್ಕ್ರತಿ ಸಂಫ್ರದಾಯ ಊರಿನ ಹಿರಿಮೆ ಹೆಚ್ಚಿಸುತ್ತದೆ.ತಲೆಮಾರುಗಳಿಂದ ಬಂದ ಸಂಪ್ರದಾಯ ಆಚರಣೆಗಳು ಮುಂದಿನ ತಲೆಮಾರುಗಳಿಗೆ ತಲುಪಿದಾಗ ಭಾಷೆಯ ಸೊಗಡು ಚೈತನ್ಯ ಹೊಂದಿರುತ್ತದೆ.ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ಅನಾವರಣಗೊಂಡ ಕುಂದಾಪ್ರ ಸಂಸ್ಕ್ರತಿ ಜೋಡಣೆ ಇತರರಿಗೆ ಮಾದರಿ ಇವುಗಳು ದಾಖಲೆಯಾಗಿ ಉಳಿಸಿಕೊಳ್ಳಬೇಕಿದೆ ಎಂದರು.
ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ಕುಮಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಪ್ರದಾಯ ಸಂಸ್ಕ್ರತಿ ಹಾಗೂ ನೆಲ ಮೂಲಗಳ ಆಚರಣೆಗಳನ್ನು ಇಂದಿನ ಯುವ ಯುವ ಸಮುದಾಯಕ್ಕೆ ಪರಿಚಯಿಸುವ ಜೊತೆಗೆ ಗ್ರಾಮೀಣ ಭಾಗದ ಆಟೋಟಗಳನ್ನು ಪರಿಚಯಿಸುವ ಉದ್ದೇಶದ ಹಿನ್ನೆಲೆ ಈ ಕಾರ್ಯಕ್ರಮದ್ದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ,ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಕುಮಾರ್ ಶೆಟ್ಟಿ, ಖಜಾಂಚಿ ಮೋಹನದಾಸ್ ಶೆಟ್ಟಿ ಮುಂಬೈ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸುಜ್ಞಾನ ಶಿಕ್ಷಣ ಸಂಸ್ಥೆಯ ರಮೇಶ ಶೆಟ್ಟಿ, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಖ.ರೈ.ಸೇ.ಸ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉದ್ಯಮಿಗಳಾದ ಡಾ. ಗೋವಿಂದ ಬಾಬು ಪೂಜಾರಿ, ಆದರ್ಶ ಶೆಟ್ಟಿ, ರಮೇಶ ದೇವಾಡಿಗ, ವೆಂಕಟ್ರಮಣ ಶೇರುಗಾರ್, ನೆಲ್ಯಾಡಿ ದಿವಾಕರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಪಡುಕೆರೆ,ಪತ್ರಕರ್ತ ಕೆ. ಸಿ. ರಾಜೇಶ ಕುಂದಾಪುರ ಉಪಸ್ಥಿತರಿದ್ದರು.
ಗಣ್ಯರ ಬೇಟಿ: ಉಡುಪಿ –ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ,ಉಡುಪಿ ಶಾಸಕ ಯಶಪಾಲ್ ಸುವರ್ಣ,ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ,ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ಆಕರ್ಷಕ ಸ್ಪರ್ಧೆ; ಮರೆತುಹೋದ ಗುಡ್ನ ಚೆನ್ನೆಮಣೆ ಚಿಟ್ ಬಿಲ್ ಬೀಸ್ ಬಲಿ ಮುಂತಾದ ಸ್ಪರ್ಧೆಗೆ ನೂರಾರು ಸ್ಪಧಿ೯ಗಳು ಭಾಗವಹಿಸಿದರು.ಗಮ್ಮತ್ 2025 ಕಾರ್ಯಕ್ರಮಕ್ಕೆ ಜನಸಾಗರ ಹರಿದುಬಂದಿದ್ದು ಸಾವಿರಾರು ಜನರು ಕೆಸರುಗದ್ದೆಯಲ್ಲಿ ಮಿಂದೆದ್ದರು. ಬೆಳಿಗ್ಗೆ ರಾಹುತನಕಟ್ಟೆಂದ ಜೆಎನ್ಆರ್ ಹಾಲ್ ತನಕ ವಿವಿಧ ಭಜನಾ ತಂಡಗಳು, ಎತ್ತಿನಗಾಡಿ, ಯಕ್ಷಗಾನ ವೇಷಗಳು, ಚಂಡೆ ತಂಡಗಳಿಂದ ವೈಭವದ ಮೆರವಣಿಗೆ ವೈಭವದ ಮೆರವಣಿಗೆ, ನಂತರೆ ಕಂಬಳಗದ್ದೆಯಲ್ಲಿ 35 ಜೊತೆ ಕೋಣಗಳ ಆಕರ್ಷಕ ಕಂಬಳ ನಡೆಯಿತು.ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಗ್ರಾಮೀಣ ಸೊಗಡಿನ ವಿವಿಧ ಸ್ಪರ್ಧೆಗಳು ಜರುಗಿತು.
ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿದರು.ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಸುನೀಲ್ ಬೈಂದೂರು ವಂದಿಸಿದರು.
ವರದಿ/ಗಿರಿ ಶಿರೂರು