ಶಿರೂರು: ಕಳೆದ 28 ವರ್ಷಗಳಿಂದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ 9 ವರ್ಷಗಳಿಂದ ಶಿರೂರು ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಾಬು ಬಿಲ್ಲವ ಶಿರೂರು ಇವರ ಬೀಳ್ಕೋಡುಗೆ ಸಮಾರಂಭ ಗುರುವಾರ ಶಿರೂರು ಶಾಖೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಾಬು ಬಿಲ್ಲವ ದಂಪತಿಗಳನ್ನು ಬ್ಯಾಂಕ್ ಆಫ್ ಬರೋಡಾದಿಂದ ಸಮ್ಮಾನಿಸಲಾಯಿತು.
ಹಿರಿಯ ಶಾಖಾ ವ್ಯವಸ್ಥಾಪಕ ಕಿಶೋರ್ ಕುಮಾರ್,ನಿವೃತ್ತ ವಿಜಯ ಬ್ಯಾಂಕ್ ಸೀನಿಯರ್ ಮೆನೇಜರ್ ಸತೀಶ ಕುಮಾರ್ ಶೆಟ್ಟಿ,ಸಹಾಯಕ ಶಾಖಾ ವ್ಯವಸ್ಥಾಪಕ ಸುಧೀಂದ್ರ ಪೈ,ಸಿಬ್ಬಂದಿಗಳಾದ ಪಾಂಡುರಂಗ ನಾಯ್ಕ,ಅರುಣ್ ಕುಮಾರ್ ಶೆಟ್ಟಿ,ಮುಕುಂದ ನಾಯ್ಕ,ಜಗದೀಶ ಬಿಲ್ಲವ,ಕಾರ್ಮಿಕ ಸಂಘದ ಅಧ್ಯಕ್ಷ ಗುರುದತ್ತ,ಜಯರಾಮ ಪೂಜಾರಿ,ವಿಶ್ವನಾಥ ಕೋಟ್ಯಾನ್ ಹಾಗೂ ಗ್ರಾಹಕರು ಹಾಜರಿದ್ದರು.