ಬೈಂದೂರು: ಭಾಷೆ, ಸಂಸ್ಕ್ರತಿ, ಪರಂಪರೆಗಳಿಗೆ ಅದರದ್ದೆ ಆದ ಇತಿಹಾಸವಿದೆ.ಭಾಷೆ ಕೇವಲ ಮಾತಿಗೆ ಸೀಮಿತವಾಗಿರುವುದಿಲ್ಲ ಬದಲಾಗಿ ದೈನಂದಿನ ದಿನಚರಿಯ ಅಂಗವಾಗಿದೆ.ಕುಂದಾಪ್ರ ಕನ್ನಡ ನಮ್ಮೆಲ್ಲರ ಬದುಕಾಗಿದೆ ಎಂದು ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ಡಾ. ರವಿ ಶೆಟ್ಟಿ ಹೇಳಿದರು  ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡ ಸಂಸ್ಕ್ರತಿ ಪ್ರತಿಷ್ಠಾನ ಬೈಂದೂರು ಸಂಸ್ಥೆ ಇದರ ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟ “ಗಮ್ಮತ್ತ್” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಮಾತುಗಳನ್ನಾಡಿದರು.

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ, ಜಿ.ಪಂ ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ, ಎಸ್. ಮದನ ಕುಮಾರ್, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಉಪ್ಪುಂದ ಗ್ರಾ.ಪಂ ಸದಸ್ಯ ಶೇಖರ ಪೂಜಾರಿ ಉಪ್ಪುಂದ,ಕತಾರ್ ಕರ್ನಾಟಕ ಸಂಘದ ಸುಬ್ರಹ್ಮಣ್ಯ ಹೆಬ್ಬಾಗಿಲು, ಬೈಂದೂರು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ. ಪೂಜಾರಿ, ಸುರೇಶ ಶೆಟ್ಟಿ ಸೂರ್‍ಕುಂದ, ನೆಲ್ಯಾಡಿ ದಿವಾಕರ ಶೆಟ್ಟಿ, ಶ್ರೀ ಸೇನೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಯು. ಸಂದೇಶ ಭಟ್ ಉಪ್ಪುಂದ, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿವಿಧ ದಾನಿಗಳನ್ನು ಗೌರವಿಸಲಾಯಿತು. ಪ್ರತಿಷ್ಠಾನ ದ ಸಂಚಾಲಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿದರು.ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಸುನೀಲ್ ಬೈಂದೂರು ವಂದಿಸಿದರು.

 

ಗಮ್ಮತ್ ಕ್ರೀಡಾ ಸ್ಪರ್ಧೆಯ ಫಲಿತಾಂಶ.

ಕೊಟ್ಟಿ ಸೆಡುದ್:

ಪ್ರಥಮ: ಮೂಕಾಂಬು ಆನಂದ ಪೂಜಾರಿ

ದ್ವಿತೀಯ: ಮಾಲತಿ ಆರ್.ಪೂಜಾರಿ

ಬೀಸ್ ಬಲಿ ರೌಂಡ್ ಬೀಸುದ್;

ಪ್ರಥಮ: ಚಂದ್ರ ಖಾರ್ವಿ ತಾರಾಪತಿ

ದ್ವಿತೀಯ: ವೀರಭದ್ರ ಖಾರ್ವಿ

ಛದ್ಮವೇಷ ಸ್ಪರ್ಧೆ:

ಪ್ರಥಮ: ರಿಧಿ ಆರ್.ಪಡುವರಿ

ದ್ವಿತೀಯ: ಸ್ಮರಣಿಕ ಸೂರ್ಕುಂದ

ಹೂಮಾಲೆ ಕಟ್ಟುವ ಸ್ಪರ್ಧೆ:

ಪ್ರಥಮ: ಪ್ರಮೀಳಾ ಶೇಟ್

ದ್ವಿತೀಯ: ವೇದಾವತಿ

ಗುಡ್ನ ಸ್ಪರ್ಧೆ:

ಪ್ರಥಮ: ನಾಗರತ್ನ ಎನ್.ಪೂಜಾರಿ

ದ್ವಿತೀಯ: ಸುಜಾತ ಜಯಕುಮಾರ್ ಮೊಗೇರಿ

ಕುಂದಾಪ್ರ ಹಾಡಿನ ಸ್ಪರ್ಧೆ

ಪ್ರಥಮ: ಮಂಜಮ್ಮ ಶೆಡ್ತಿ

ದ್ವಿತೀಯ: ಗೋಪಾಲ ಆಚಾರಿ ಉಪ್ಪುಂದ

ಭಾಷಣ ಸ್ಪರ್ಧೆ:

ಪ್ರಥಮ: ಸಾನ್ವಿ ವಿ.ಎಸ್

ದ್ವಿತೀಯ:ಅನ್ನಿಕಾ

ತೆಂಗಿನ ಚ್ವಾಂಗಿ ಮಾದರಿ ತಯಾರಿಸುವುದು:

ಪ್ರಥಮ: ಸುಚಿತ್ರ

ದ್ವಿತೀಯ: ಪಲ್ಲವಿ

ಮಡ್ಲ ನೇಯುವುದು:

ಪ್ರಥಮ: ಜಯಶ್ರೀ

ದ್ವಿತೀಯ: ಸುಧಾ ಪಡುವರಿ

ಚೀಟ್‌ಬಿಲ್ಲು  ಸ್ಪರ್ಧೆ;

ಪ್ರಥಮ: ಸೃಜನ್ ತೂದಳ್ಳಿ

ದ್ವಿತೀಯ: ಪುಷ್ಪರಾಜ್ ಶೆಟ್ಟಿ ಶಿರೂರು

ಚೆನ್ನೆಮಣೆ ಆಟ:

ಪ್ರಥಮ: ಸುಮನಾ ನಾಯ್ಕನಕಟ್ಟೆ

ದ್ವಿತೀಯ: ದಿವ್ಯಾ ದೇವಾಡಿಗ

ಥ್ರೋಬಾಲ್ ಮಹಿಳೆಯರು:

ಪ್ರಥಮ: ಶ್ರೀನಿಧಿ ಬೈಂದೂರು

ದ್ವಿತೀಯ: ಹೋಲಿಕ್ರಾಸ್ ಬಂದೂರು

ಕಬ್ಬಡ್ಡಿ ಪುರುಷರು:

ಪ್ರಥಮ: ಟೀಮ್ ಗಂಗನಾಡು

ದ್ವಿತೀಯ: ಟೀಮ್ ಹೊಸೂರು

ಕಬಡ್ಡಿ ಮಹಿಳೆಯರು:

ಪ್ರಥಮ: ಭಗವತಿ ಕೆರ್ಗಾಲ್

ದ್ವಿತೀಯ:ವಿಚಿತ್ರ ಬೈಂದೂರು

ವಾಲಿಬಾಲ್ ಪುರುಷರು:

ಪ್ರಥಮ: ಎಸ್.ಎಲ್ ಬಡಾಕೆರೆ

ದ್ವಿತೀಯ: 8 ಸ್ಟಾರ್ ಉಪ್ಪುಂದ

ಹಗ್ಗಜಗ್ಗಾಟ ಮಹಿಳೆಯರು:

ಪ್ರಥಮ: ಸಿದ್ದಿವಿನಾಯಕ ಗೋಳಿಹೊಳೆ

ದ್ವಿತೀಯ:ಯಕ್ಷೇಶ್ವರಿ ಪ್ರೆಂಡ್ಸ್ ಉಪ್ಪಿನಕುದ್ರು

ಹಗ್ಗಜಗ್ಗಾಟ ಪುರುಷರು;

ಪ್ರಥಮ: ಭಾವ ಬಂದರು

ದ್ವಿತೀಯ: ಗೂಳಿ ಪ್ರೆಂಡ್ಸ್

ಅಡಿಕೆ ಹಾಳೆ ಎಳೆಯುವುದು:

ಪ್ರಥಮ: ನೇಹಾ – ಅನ್ವಿತಾ

ದ್ವಿತೀಯ: ಶ್ರಾವ್ಯ -ತುಳಸಿ

ಮಡಿಕೆ ಒಡೆಯುವುದು:

ಪ್ರಥಮ: ಟೀಮ್ ಗಮ್ಮತ್ತ್

ಚಿತ್ರಕಲಾ ಸ್ಪರ್ಧೆ ಎಲ್.ಕೆ.ಜಿ -4ನೇ ತರಗತಿ

ಪ್ರಥಮ: ಯಜ್ಞಾ ಎನ್.ಪೂಜಾರಿ

ದ್ವಿತೀಯ: ಸಾಯಿಹಿಮಾನಕ್

ಚಿತ್ರಕಲಾ ಸ್ಪರ್ಧೆ 5ರಿಂದ -7ನೇ ತರಗತಿ

ಪ್ರಥಮ: ಆಧ್ಯ ಎಮ್

ದ್ವಿತೀಯ: ವಂಶಿಕಾ

 ವರದಿ/ಗಿರಿ ಶಿರೂರು

 

 

 

 

 

 

 

Leave a Reply

Your email address will not be published. Required fields are marked *

one × 4 =