ಉಪ್ಪುಂದ; ಕರಾವಳಿಯ ಸಂಸ್ಕೃತಿಯ ವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿ, ಪರಿಚಯಿಸುವ ಉದ್ದೇಶದಿಂದ ಉಪ್ಪುಂದದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇತಿಹಾಸದ ಮೊದಲ ಭಾರೀಗೆ ಉಪ್ಪುಂದ ಶ್ರೀ ದುರ್ಗಾ ಟೈಗರ್ಸ ಸಂಯೋಜನೆಯಲ್ಲಿ ಮಂಗಳೂರು, ಉಡುಪಿ ಜಿಲ್ಲಾ ಮಟ್ಟದ ಹುಲಿ ಪರ್ವ-2026 ಪ್ರತಿಷ್ಠತ ತಂಡಗಳ ಆಕರ್ಷಕ ಹುಲಿ ಕುಣಿತ ಸ್ಪರ್ಧೆ ಅ.31ರಂದು ಸಂಜೆ ಗಂಟೆ 5ಕ್ಕೆ ನಡೆಯಲಿದೆ ಎಂದು ಶೇಖರ ಪೂಜಾರಿ ಹೇಳಿದರು. ಅವರು ಅ.29ರಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಗ್ರಾಮೀಣ ಪರಿಸರದಲ್ಲಿ ಹಲವು ವರ್ಷಗಳಿಂದ ಹುಲಿ ವೇಷ ಕುಣಿತ ನಡೆಸಿಕೊಂಡು ಬರುತ್ತಿದ್ದು ಈ ಕುರಿತು ಜನರಿಗೆ ಇನ್ನಷ್ಟು ಮನೋರಂಜನೆಯ ಜತೆಗೆ ಹುಲಿ ಕುಣಿತಗಳ ವಿಶೇಷತೆಗಳನ್ನು ತಿಳಿಸುವ ಆಲೋಚನೆಯಿಂದಾಗಿ ಈ ಕಾರ್ಯಕ್ರಮ ನಡೆಯಲಿದೆ, ಉಡುಪಿ, ಮಂಗಳೂರು ಜಿಲ್ಲೆಯ 6ತಂಡಗಳು ಭಾಗವಹಿಸಲಿವೆ, ಪ್ರಥಮ 2,55,555 ಮತ್ತು ದ್ವಿತೀಯ 1,55,55 ನಗದು ಮತ್ತು ಶಾಶ್ವತ ಫಲಕ ನೀಡಲಾಗುತ್ತದೆ. ಭಾಗವಹಿಸುವ ಇತರೆ ತಂಡಗಳಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ಅರೆಹೊಳೆ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸುಮಾರು 4ರಿಂದ 5ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು. ಸಭಾ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಜನಪ್ರತಿನಿಧಿಗಳು ಇರಲಿದ್ದಾರೆ.ಉಪ್ಪುಂದದಲ್ಲಿ ಹುಲಿ ಕುಣಿತ ನಡೆಸಿಕೊಂಡು ಬರುತ್ತಿದ್ದ ಹಿರಿಯ ಹುಲಿಗಳನ್ನು ಗುರುತಿಸಿ ಗೌರವಿಸಲಾಗುತ್ತದೆ ಎಂದರು.

ಅರೆಹಾಡಿ ಮಂಜು ದೇವಾಡಿಗ, ಭರತ ದೇವಾಡಿಗ, ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಕೇಶವ ದೇವಾಡಿಗ, ಮಣಿಕಂಠ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

sixteen − fifteen =