ಬೈಂದೂರು: ರೋಟರಿ ಕ್ಲಬ್‌ ಕುಂದಾಪುರ ಹಾಗೂ ಸನ್‌ರೈಸ್‌ ವತಿಯಿಂದ ಕುಂದಾಪುರ ಮೊಗವೀರ ಸಭಾಭವನದಲ್ಲಿ ನಡೆದ ವಲಯ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಬೈಂದೂರು ರೋಟರಿ ಕ್ಲಬ್‌ ರನ್ನರ್‌ ಆಫ್‌ ಪ್ರಶಸ್ತಿ ಪಡೆದಿದೆ.ಭಾಗವಹಿಸಿದ ಪ್ರತಿ ಸ್ಪರ್ಧೆಯಲ್ಲೂ ಬಹುಮಾನಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ.
ನಾಟಕದಲ್ಲಿ ಪ್ರಥಮ, ಡ್ಯುಯೇಟ್‌ ಹಾಡು ಪ್ರಥಮ,ಏಕಪಾತ್ರಾಭಿನಯ ಪ್ರಥಮ,ಮಕ್ಕಳ ನೃತ್ಯ ಪ್ರಥಮ,ಸಮೂಹ ನೃತ್ಯ ದ್ವಿತೀಯ,ಸಮೂಹ ಗಾನ ದ್ವಿತೀಯ,ಸೋಲೊ ಸಾಂಗ್‌  ಸೋಲೊ ನೃತ್ಯ ದ್ವಿತೀಯ ಸ್ಥಾನ ಗಳಿಸುವ ಜೊತೆಗೆ ಸಮಗ್ರ ರನ್ನರ್‌ ಪ್ರಶಸ್ತಿ ಗಳಿಸಿದೆ.
ಈ ಸಂದರ್ಭದಲ್ಲಿ ಬೈಂದೂರು ರೋಟರಿ ಕ್ಲಬ್‌ ಅಧ್ಯಕ್ಷ ಅರುಣ್‌ ಕುಮಾರ್‌ ಶಿರೂರು,ಕಾರ್ಯದರ್ಶಿ ಮಣಿಕಂಠ ದೇವಾಡಿಗ,ಪೂರ್ವಾಧ್ಯಕ್ಷರಾದ ಐ.ನಾರಾಯಣ,ಶಾರದಾ ಟೀಚರ್‌,ಪ್ರಸಾದ ಪ್ರಭು,ಸುಧಾಕರ ಪಿ,ಆನಂದ ಮದ್ದೋಡಿ,ಪೂರ್ಣಿಮಾ ಟೀಚರ್‌,ನಾಗೇಂದ್ರ ಬಂಕೇಶ್ವರ,ಸುಬ್ರಹ್ಮಣ್ಯ ಜಿ.ಉಪ್ಪುಂದ,ಡಾ.ಪ್ರವೀಣ್‌ ಶೆಟ್ಟಿ,ಹರೀಶ್‌ ಶೇಟ್‌,ನಾರಾಯಣ ದೇವಾಡಿಗ,ಜತೀಂದ್ರ ಮರವಂತೆ,ಉದಯ ಆಚಾರ್‌,ಮಂಜುನಾಥ ಮಹಾಲೆ,ಗೋವಿಂದ ನಾಯ್ಕನಕಟ್ಟೆ,ಮೋಹನ ರೇವಣ್ಕರ್‌,ದಿನೇಶ ಬೈಂದೂರು,ಲಕ್ಷ್ಮೀ ಪ್ರಕಾಶ್‌,ರಾಘವೇಂದ್ರ ಉಪ್ಪುಂದ,ಶಿವರಾಮ ಆಚಾರ್,ವಿಷ್ಣು ಪೈ,ಪೂರ್ಣಿಮಾ ಪೈ,ಜಾನ್ವಿ ಪಿ.ಪ್ರಭು,ದೀಪಾ ಮಂಜುನಾಥ ಬಿಲ್ಲವ,ಸುಜಾತ ರಾಘವೇಂದ್ರ,ಸೌಮ್ಯ ಸುಬ್ರಹ್ಮಣ್ಯ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

two × 1 =