ಶಿರೂರು: ಶಿರೂರಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ಬಹಳಷ್ಟುವಿಭಿನ್ನವಾಗಿರುತ್ತದೆ.ಅಭಿವೃದ್ದಿಯ ವಿಚಾರದಲ್ಲಿ ಶಿರೂರಿನಲ್ಲಿ ರಾಜಕೀಯ ಮರೆತು ಸಾಮರಸ್ಯ ಮೆರಯುವುದು ಊರಿನ ಹೆಗ್ಗಳಿಕೆ.ಶಿರೂರು ಉತ್ಸವ ಸೇರಿದಂತೆ ಹಲವು ಬ್ರಹತ್ ಕಾರ್ಯಕ್ರಮ ಶಿರೂರಿನಲ್ಲ ನಡೆದಿದ್ದು.ಶಿರೂರು ಹಬ್ಬ -2026 ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ಉಡುಪಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಹೇಳಿದರು ಅವರು ರವಿವಾರ ರೋಟರಿ ಕ್ಲಬ್ ಬೈಂದೂರು,ಜೆಸಿಐ ಶಿರೂರು,ಶಿರೂರು ನ್ಯೂಸ್ ಡಾಟ್ ಕಾಮ್,ಎಕ್ತಾ ಇವೆಂಟ್ಸ್ ಹಾಗೂ ಜನಸ್ನೇಹಿ ಇವೆಂಟ್ಸ್ ಇವರ ಜಂಟಿ ಸಹಯೋಗದಲ್ಲಿ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಐದು ದಿನಗಳ ಶಿರೂರು ಹಬ್ಬ -2026 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮ ಎ.ಮೇಸ್ತ,ಗ್ರಾ.ಪಂ ಮಾಜಿ ಸದಸ್ಯ ಮುಕ್ರಿ ಅಲ್ತಾಫ್, ಬೈಂದೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ, ಶಿರೂರು ಹಬ್ಬದ ಆಯೋಜಕರಾದ ಪ್ರಭಾಕರ ಮಂದಾರ್ತಿ,ಸತೀಶ ಶೆಟ್ಟಿ, ಬೈ.ವ್ಯ.ಸೇ.ಸಂಘದ ಮಾಜಿ ನಿರ್ದೇಶಕ ಗಿರೀಶ್ ಮೇಸ್ತ,ಕಚ್ಚಿ ಮುಸ್ತಾಕ್,ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.






ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಜಯಂತಿ ಶೆಟ್ಟಿ ಹಾಗೂ ಬೈದೂರು ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಶಿರೂರು ನ್ಯೂಸ್ ಡಾಟ್ ಕಾಮ್ ಸಂಪಾದಕ ಅರುಣ್ ಕುಮಾರ್ ಶಿರೂರು ರವರನ್ನು ಸಮ್ಮಾನಿಸಲಾಯಿತು.
ಶಿರೂರು ಹಬ್ಬದ ಆಯೋಜಕರಾದ ಖಲೀಲ್ ಕೆರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಿರೀಶ್ ಪಿ.ಮೇಸ್ತ ಸ್ವಾಗತಿಸಿದರು,ರೋಟರಿ ಪೂರ್ವಾಧ್ಯಕ್ಷ ಪ್ರಸಾದ ಪ್ರಭು ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ ಶೆಟ್ಟಿಕಾರಿಕಟ್ಟೆವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಪವನ್ ಕುಮಾರ್ ಬಪ್ಪನಬೈಲು