ಬೈಂದೂರು: ಕಳೆದ ನಲವತ್ತು ವರ್ಷಗಳಿಂದ ಹೋರಾಟದ ಮೂಲಕ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ.ಬಿಜೆಪಿ ಪಕ್ಷ ಯಡ್ಯೂರಪ್ಪರವರ ವಯಕ್ತಿಕ ಆಸ್ತಿಯಲ್ಲ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿ ಭಾಗಕ್ಕೆ ಬೇಟಿ ನೀಡುತ್ತಿದ್ದೇನೆ.ಸಮಸ್ತ ಹಿಂದೂ ಕಾರ್ಯಕರ್ತರು ಸಂಘಟಿತರಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ.ನನ್ನ ವಿರುದ್ದ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಕುಟುಂಬ ನಡೆಸುತ್ತಿರುವ ಯಾವ ಷಡ್ಯಂತ್ರಕ್ಕೂ ಹೆದರಲಾರೆ.ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಯಡ್ಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಸೋಲುವುದು ಖಚಿತ ಎಂದು ಈಶ್ವರಪ್ಪ ಹೇಳಿದರು.ಅವರು ಹೆಮ್ಮಾಡಿ ಜಯಶ್ರೀ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಬಾರದೇನ್ನುವ ಇವರಿಗೆ ಮೋದಿ ಯಾರ ಮನೆಯ ಆಸ್ತಿಯಲ್ಲ.ಜಗತ್ತು ಕಂಡ ಒಬ್ಬ ಶ್ರೇಷ್ಟ ನಾಯಕ.ಹಿಂದುತ್ವದ ಜೊತೆಗೆ ಸಮಾನತೆ ಮೂಲಕ ಭಾರತ ದೇಶವನ್ನು ವಿಶ್ವಮಾನ್ಯದಲ್ಲಿ ಬೆಳಗಿದ ಏಕೈಕ ನಾಯಕರಾಗಿದ್ದಾರೆ.ಅವರ ಭಾವಚಿತ್ರ ಬಳಸುವುದು ಹಿಂದುತ್ವದ ಸಂಘಟಿತ ಶ್ರಮದ ಫಲ.ಬೈಂದೂರು ಕ್ಷೇತ್ರ ನನ್ನ ಕರ್ಮ ಭೂಮಿಯಾಗಿದೆ.ಹಿಂದೂ ಕಾರ್ಯಕರ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ಸಹಿಸೋದಿಲ್ಲ.ಕರ್ನಾಟಕದಲ್ಲಿ ಅಪ್ಪ ಮಕ್ಕಳ ರಾಜಕೀಯ ಅಂತ್ಯವಾಗುತ್ತದೆ.ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮುಖಂಡರಾದ ಶ್ರೀಧರ ಬಿಜೂರು,ಗೋಪಾಲಕೃಷ್ಣ ನಾಡ,ಕಟ್ಬೆಲ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್,ಮೀನುಗಾರ ಮುಖಂಡ ಮೋಹನ್ ಖಾರ್ವಿ ಉಪ್ಪುಂದ ಉಪಸ್ಥಿತರಿದ್ದರು.
News/pic; Giri shiruru