ಬೈಂದೂರು: ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ ಈದುಲ್ ಫಿತ್ರ್ (ರಮ್ಜಾನ್) ಹಬ್ಬವನ್ನು ಬೈಂದೂರು ಹಾಗೂ ಶಿರೂರಿನ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಬುಧವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಬಿಲ್ಲಾಲ್ ಮಸೀದಿ ಬೈಂದೂರು,ವಿವಿಧ ಕಡೆಗಳಲ್ಲಿ ಮುಂಜಾನೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಆಚರಿಸಿಕೊಂಡರು.

News/pic: Giri shiruru