ಉಪ್ಪುಂದ: ಬಿಜೂರು ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನದ ವಾರ್ಷಿಕೋತ್ಸವ, ಏಕಾಹ ಅಖಂಡ ಭಜನೋತ್ಸವ ಹಾಗೂ ಗೆಂಡ ಸೇವೆ ಕಾರ್ಯಕ್ರಮ ಎ.14ರಿಂದ 16ರ ವರೆಗೆ ನಡೆಯಲಿದೆ.
ಎ.14 ರಂದು ಬೆಳಗ್ಗೆ ಗಂಟೆ 9 ರಿಂದ ಕಲಾತತ್ವಹೋಮ, ಅಷ್ಠೋತ್ತರ ಶತಕಲಶ ಸ್ಥಾಪನೆ, ರುದ್ರಹೋಮ, ನಾಗದೇವರಿಗೆ ಅಧಿವಾಸ ಹೋಮ, ನಾಗಗಾಯತ್ರಿ ಹೋಮ, ಸರ್ಪಶಾಂತಿ ಹೋಮಾದಿಗಳು, ಕಲಾಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೆ ನಡೆಯಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6 ರಿಂದ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಕಲಾಭಿವೃದ್ಧಿ ಹೋಮ, ಆಶ್ಲೇಷಾಬಲಿ, ಅಷ್ಠಾವಧಾನ ಸೇವೆ ಹಾಗೂ ರಾತ್ರಿ ಗಂಟೆ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಎ.15 ರಂದು ಬೆಳಗ್ಗೆ ಗಂಟೆ ಏಕಾಹ ಅಖಂಡ ಭಜನೋತ್ಸವದ ಪ್ರದೀಪ ಸ್ಥಾಪನೆಯೊಂದಿಗೆ ಏಕಾಹ ಅಖಂಡ ಭಜನೋತ್ಸವ ಪ್ರಾರಂಭಗೊಳ್ಳುತ್ತದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ ನಗರ ಭಜನೆ ನಡೆಯಲಿದೆ.
ಎ.16 ರಂದು ಬೆಳಗ್ಗೆ ಪ್ರದೀಪ ವಿಸರ್ಜನೆಯೊಂದಿಗೆ ಭಜನ ಮಂಗಲೋತ್ಸವ ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೆಂಡ ಸೇವೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಹನುಮಗಿರಿ ದ.ಕ. ವತಿಯಿಂದ ಉತ್ತಮ ಸೌದಾಮಿನಿ ಯಕ್ಷಗಾನ ಬಯಲಾಟ ನಡೆಯಲಿದೆ.