ಶಿರೂರು: ಜೆಸಿಐ ಶಿರೂರು ,ಜ್ಯೂನಿಯರ್ ಜೆಸಿ, ಲೇಡಿ ಜೆಸಿ ವಿಂಗ್ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇವರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ನಡೆಯಿತು

ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹಮ್ಮದ್ ಸುಹೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಲ ಕಾಲಕ್ಕೆ ಸಮರ್ಪಕವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಾಗಿರುವುದು ಇಂದಿನ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ.ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಸಲ್ಲದು ಆರಂಭದಲ್ಲೆ ಪರಿಶೀಲನೆ ಮತ್ತು ಸೂಕ್ತ ಚಿಕಿತ್ಸೆ ದೊರೆತಾಗ ಕ್ಯಾನ್ಸರ್‌ನಂತಹ ರೋಗಗಳನ್ನು ಕೂಡ ನಿಯಂತ್ರಣಕ್ಕೆ ತರಬಹುವುದು ಆದರೆ ಸೂಕ್ತ ಕಾಳಜಿ ಮತ್ತು ಚಿಕಿತ್ಸೆ ಅತ್ಯಗತ್ಯ ಎಂದರು.

ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆರೋಗ್ಯ ಇಲಾಖೆಯ ಅಶ್ವಿನಿ,ಕಾಲೇಜಿನ ಉಪಪ್ರಾಂಶುಪಾಲ ಬೊಮ್ಮಯ್ಯ ಗಾಂವ್ಕರ್,ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ ರೇವಣ್ಕರ್,ಪೂರ್ವಾಧ್ಯಕ್ಷ ನಾಗೇಂದ್ರ ಪ್ರಭು,ಜೇಸಿರೇಟ್ ಅಧ್ಯಕ್ಷೆ ಲತಾ ಪೂಜಾರಿ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಸುರೇಶ ಮಾಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಜಯಂತ ಪೂಜಾರಿ ವಂದಿಸಿದರು.

News/Giri shiruru

pic: Suresh makodi 

Leave a Reply

Your email address will not be published.

two + 7 =