ಶಿರೂರು: ಶಿರೂರು ಮಾದರಿ ಶಾಲೆ ವತಿಯಿಂದ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿಯಾಗಿದೆ.ಈ ಶಾಲೆಯ ವಿದ್ಯಾರ್ಥಿಯಾದ ಓಂಕಾರ ರವೀಂದ್ರ ಮೇಸ್ತ ಇವರು ಇನ್ಸ್‌ಪಯರ್ ಆವಾರ್ಡ್ ಪ್ರಶಸ್ತಿ ಪಡೆದಿರುವುದು ಮಾದರಿ ಶಾಲೆಗೆ ಹೆಮ್ಮೆಯ ವಿಷಯವಾಗಿದೆ.ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿದಾಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರತರಲು ಸಾಧ್ಯ ಎಂದು ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಹೇಳಿದರು ಅವರು ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ವಿವೇಕ ತರಗತಿ ಕೊಠಡಿ,ಪಿ.ಎಂ.ಶ್ರೀ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಗಣಿತ ಕಲಿಕಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರಘುವೀರ ಶೇಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ,ಉಷಾ ಜನಾರ್ಧನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಸಿ.ಆರ್.ಪಿ ವಿಶ್ವನಾಥ ಮೇಸ್ತ,ನಾಯ್ಕನಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ,ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ಸತೀಶ ಕುಮಾರ್ ಶೆಟ್ಟಿ,ಹಿರಿಯರಾದ ವಿಶ್ವನಾಥ ಹೆಗ್ಡೆ ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ನಾಗರತ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು.ಶಿಕ್ಷಕ ಸೋಮರಾಯ ಜನ್ನು ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ವಂದಿಸಿದರು.
News/Giri shiruru
pic: a.one studio shiruru