ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ರೈತರಿಗೆ ಮಾದರಿ ಸಂಸ್ಥೆಯಾಗಿ ಸೇವೆ ನೀಡುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.ಇದಕ್ಕೆ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಯವರ ಅನನ್ಯ ಕೊಡುಗೆ ಕಾರಣವಾಗಿದೆ.ರೈತರಿಗೆ ಹೆಚ್ಚು ಸೇವೆ ನೀಡಿದಷ್ಟು ಕೃಷಿ ಸೇರಿದಂತೆ ಹೈನುಗಾರಿಕೆ ಕ್ಷೇತ್ರ ಬಲಪಡಿಸಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಖ.ರೈ.ಸೇ.ಸಂಘದ ರೈತರ ಕಾರ್ಯಕ್ರಮಗಳು ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಅವರು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆದ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ರೈತ ಸಿರಿ, ರೈತ ಸೇವಾ ಒಕ್ಕೂಟ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಹಿರಿಯ ರೈತರ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಕೃಷಿ ಇಲಾಖೆಯನ್ನು ಬಲಪಡಿಸಿ ರೈತರ ಜೊತೆಗೆ ನಿಲ್ಲುವ ಅಗತ್ಯವಿದೆ.ರೈತರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ರೈತರಿಗೆ ಆತ್ಮಸ್ತರ್ಯ ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಆದ್ಯತೆಗಳು ಸರಕಾರದ ಮಟ್ಟದಲ್ಲಿ ದೊರಕುವಂತಾದಾಗ ಕೃಷಿ ಕ್ಷೇತ್ರದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷ  ಕೆ.ಪಿ ಸುಚರಿತ ಶೆಟ್ಟಿ ,ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ,ಕುಂದಾಪುರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಜೆ. ನಿಽಶ್ ಹೊಳ್ಳ,ರೂಪಾ ಜೆ. ಮಾಡ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಕುಂದಾವುರ,ಡಾ. ಬಿ. ಧನಂಜಯ ಹಿರಿಯ ವಿಜ್ಞಾನಿಗಳು, ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ,ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ,ಕೆ.ಮೋಹನ ಪೂಜಾರಿ,ಬಿ.ಎಸ್.ಸುರೇಶ ಶೆಟ್ಟಿ,ಗುರುರಾಜ ಹೆಬ್ಬಾರ್,ವೀರೇಂದ್ರ ಶೆಟ್ಟಿ,ಮಂಜು ದೇವಾಡಿಗ,ನಾಗರಾಜ ಖಾರ್ವಿ,ಭರತ್ ದೇವಾಡಿಗ,ಹೂವ ನಾಯ್ಕ,ದಿನೀತಾ ಶೆಟ್ಟಿ,ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಪ್ರಗತಿಪರ ಕೃಷಿಕರಾದ ವೆಂಕಟ ಪೂಜಾರಿ ಉಬ್ಜೇರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಹಾಲು ಮಾರಾಟ ಮಾಡಿದ ಹಾಲು ಉತ್ಪಾದಕರನ್ನು ಗೌರವಿಸಲಾಯಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.ಉಪಾಧ್ಯಕ್ಷ ಈಶ್ವರ ಹಕ್ಷತೋಡ್ ವಂದಿಸಿದರು.

 

 

 

Leave a Reply

Your email address will not be published. Required fields are marked *

eleven + nine =

You missed