ಶಿರೂರು : ಸಾಂಸ್ಕ್ರತಿಕ ಚಿಂತನೆಗಳು ಊರಿಗೆ ಸಂಘಟನಾತ್ಮಕ ಮನೋಭಾವನೆ ನೀಡುವ ಜೊತೆಗೆ ಸಾಂಸ್ಕ್ರತಿಕ ಸಾಮರಸ್ಯ ಮೂಡಿಸುತ್ತದೆ.ಸಂಘ ಸಂಸ್ಥೆಗಳು ಊರಿನ ಅಭಿವೃದ್ದಿಯ ಚಿಂತನೆಯನ್ನು ಅಳವಡಿಸಿಕೊಂಡು ಸಾಂಸ್ಕ್ರತಿಕ,ಸಾಮಾಜಿಕ,ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಅಳ್ವೆಗದ್ದೆಯ ಓಂ ಗಣೇಶ ಯುವಕ ಸಂಘದ ಸಾಧನೆ ಶ್ಲಾಘನೀಯವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಅಳ್ವೆಗದ್ದೆ ಕಡಲ ಕಿನಾರೆಯಲ್ಲಿ ನಡೆದ ಓಂ ಗಣೇಶ ಯುವಕ ಸಂಘ (ರಿ.) ಅಳ್ವೆಗದ್ದೆ ಶಿರೂರು ಇದರ 20ನೇ ವರ್ಷದ ವಾರ್ಷಿಕೋತ್ಸವ ಮತ್ತು ಓಂ ಗಣೇಶ ಮಹಿಳಾ ಸಂಘದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಡಲ ಕಲರೋತ್ಸವ -2023 ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಓಂ ಗಣೇಶ ಯುವಕ ಸಂಘ (ರಿ.) ಅಳ್ವೆಗದ್ದೆ ಅಧ್ಯಕ್ಷ ಬಾಬು ಎಸ್.ಮೊಗವೀರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿರೂರು ವಲಯ ಮೀನಗಾರರ ಸಹಕಾರಿ ಸಂಘದ ಅಧ್ಯಕ್ಷ ಅಕ್ಷಯ ನಾರಾಯಣ ಮಾಸ್ತಿ,ಮಾಜಿ ಜಿ.ಪಂ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮತ್ಸೋಧ್ಯಮಿ ಮಂಜುನಾಥ ಎಂ.ಮೊಗೇರ್,ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗವೀರ,ಉದ್ಯಮಿ ಪದ್ಮಯ್ಯ ಮೊಗವೀರ,ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಗಿರೀಶ್ ಶಿರೂರು,ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷೆ ನಾಗವೇಣಿ ಬಿ.ಮೊಗವೀರ,ಓಂ ಗಣೇಶ ಮಹಿಳಾ ಸಂಘದ ಅಧ್ಯಕ್ಷೆ ಅಶ್ವಿನಿ ಚಂದ್ರ ಮೊಗವೀರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ದತ್ತಾತ್ರೇಯ ಮೊಗವೀರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಹನುಮಂತ ನಾಯ್ಕ ಬೆಳಕೆ ಕಾರ್ಯಕ್ರಮ ನಿರ್ವಹಿಸಿದರು.ನಾಗರಾಜ ಮೊಗೇರ್ ಕರಿಕಲ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಜೆ ನಗರ ಭಜನೆ,ಪುರಮೆರವಣಿಗೆ,ಸಮುದ್ರ ಪೂಜೆ ಹಾಗೂ ಗಂಗಾರತಿ ನಡೆಯಿತು.ಸಭಾ ಕಾರ್ಯಕ್ರಮದ ಬಳಿಕ ನಾಟ್ಯ-ಗಾನ-ವೈಭವ,ಸರಿಗಮಪ ಲಿಟ್ಲ್‌ಚಾಂಪ್ ಗಾಯಕಿ ದಿಯಾ ಹೆಗಡೆ,ಶಿವಾನಿ ಕೊಪ್ಪ,ಕಲರ್‍ಸ್ ಸೂಪರ್ ಖ್ಯಾತಿಯ ಅನುಪಮ,ಶ್ರೇಷ್ಟ ಹಾಗೂ ಸ್ಟೇಪ್ ಆನ್ ಸ್ಟೇಪ್ ಹಂಗಳೂರು ಕುಂದಾಪುರ ಮತ್ತು ಓಶಿಯನ್ ಹಾರ್ಟ್‌ಬ್ರೇಕ್ ಡ್ಯಾನ್ಸ್ ಕ್ರೇವ್ ಹೊನ್ನಾವರ ಇವರಿಂದ ನೃತ್ಯ ಪ್ರದರ್ಶನಗೊಂಡಿತು.
ವರದಿ/ಗಿರಿ ಶಿರೂರು
ಚಿತ್ರ: ಪವನ್ ಮೇಸ್ತ ಶಿರೂರು