ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ 75ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.ಬೈಂದೂರು ಉಪ ತಹಶೀಲ್ದಾರ ಭೀಮಪ್ಪ ಬಿಲ್ಲಾರ್ ದ್ವಜಾರೋಹಣಗೈದರು.ಬಳಿಕ ಮಾತನಾಡಿದ ಅವರು ಭಾರತ ದೇಶ ಅಮೃತಮಹೋತ್ಸವದ ಸಂಭ್ರಮದಲ್ಲಿದೆ.ಹಲವು ನಾಯಕರ ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯೋತ್ಸವವನ್ನು ಎಲ್ಲರೂ ಒಗ್ಗಟ್ಟಿನಿಂದ ಉಳಿಸಿ ಸಶಕ್ತ ಭಾರತವಾಗಲು ಪ್ರತಿಯೊಬ್ಬರು ಶ್ರಮಿಸಬೇಕು.ಗಾಂಧಿಜೀಯವರು ಗ್ರಾಮ ಸ್ವರಾಜ್ಯ ಕನಸಿನಂತೆ ಪ್ರತಿ ಗ್ರಾಮದಲ್ಲೂ ಸ್ವಾವಲಂಬಿಯಾಗಿ ಅಭಿವೃದ್ದಿಯಾಗಿ ದೇಶ ಪ್ರಗತಿಯಾದಾಗಬೇಕಿದ್ದರೆ ನಮ್ಮ ಮನೆಗಳಲ್ಲಿ ಜಾಗೃತರಾಗಿ ಸ್ವಚ್ಚತೆಗೆ ಒತ್ತು ನೀಡಬೇಕು.ಸರ್ವರೂ ಸಹಭಾಳ್ವೆಯಿಂದ ಬಾಳೋಣ ಎಂದರು.
ಈ ಸಂದರ್ಭದಲ್ಲಿ ಬೈಂದೂರು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಬೈಂದೂರು ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ಪವನ್ ನಾಯಕ್,ಪಶು ವೈದ್ಯಾಧಿಕಾರಿ ಡಾ.ನಾಗರಾಜ ಮರವಂತೆ,ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿ ನವೀನ್ ಕುಮಾರ್,ಪಿ.ಡಬ್ಲೂ.ಡಿ ಕಾರ್ಯನಿರ್ವಹಕ ಸಹಾಯಕ ಅಭಿಯಂತರ ರಾಜ್‌ಕುಮಾರ್ ಹಾಗೂ ಕಂದಾಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.
ಕರುಣಾಕರ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಹಾಗೂ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ವಂದಿಸಿದರು.
News/pic”:Giri shiruru