ಬೈಂದೂರು: ಬೈಂದೂರು ಶಾಸಕರ ಕಛೇರಿಯಲ್ಲಿ 75ನೇ ಸ್ವಾತಂತ್ರೋತ್ಸವವ ಜರುಗಿತು.ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ದ್ವಜಾರೋಹಣಗೈದರು.ಈ ಸಂಧರ್ಭದಲ್ಲಿ ಮಾತನಾಡಿ ಪ್ರಧಾನಿ ಮೋದಿಯವರ ಕನಸು ಈ ದೇಶವನ್ನು ಅಭಿವ್ರದ್ದಿ ಮೂಲಕ ಸಮ್ರದ್ದ ಹಾಗೂ ಸಮರ್ಥ ಭಾರತ ನಿರ್ಮಾಣವಾಗಿದೆ.ಭಯೋತಾಧನೆ ಬುಡ ಸಮೇತ ಕಿತ್ತೊಗೆಯುವ ಜೊತೆಗೆ ಭವ್ಯ ಭಾರತದ ನಿರ್ಮಾಣ ಪ್ರತಿಯೊಬ್ಬ ಭಾರತೀಯರ ಕನಸಾಗಿದೆ.ಭವ್ಯ ಭಾರತದ ಕೀರ್ತಿ ವಿಶ್ವದಾದ್ಯಂತ ಮತ್ತಷ್ಟು ಪಸರಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮಾಜಿ ಜಿ.ಪಂ ಸದಸ್ಯರಾದ ಸುರೇಶ ಬಟ್ವಾಡಿ,ಶಂಕರ ಪೂಜಾರಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್, ತಾ.ಪಂ ಮಾಜಿ ಸದಸ್ಯೆ ಮಾಲಿನಿ,ಶ್ಯಾಮಲ ಕುಂದರ್,ಪಡುವರಿ ಗ್ರಾ.ಪಂ ಮಾಜಿ ಅಧ್ಯಕ್ಷೆ ದೀಪಾ ಶೆಟ್ಟಿ, ಕೆ,ಭಾಗೀರಥಿ,ಪ್ರಿಯದರ್ಶಿನಿ ದೇವಾಡಿಗ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು.