ಬೈಂದೂರು: ಪಟ್ಟಣ ಪಂಚಾಯತ್‌ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ 432 ದಿನಗಳಿಂದ ರೈತ ಸಂಘದ ನೇತ್ರತ್ವದಲ್ಲಿ ನಡೆದ ಹೋರಾಟಕ್ಕೆ ಸ್ಪಂಧಿಸಿ ರೈತರಿಗೆ ಸರಕಾರ ನ್ಯಾಯ ಒದಗಿಸುವ ಜೊತೆಗೆ ಜನರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದೆ.ಈ ಯಶಸ್ಸು ಕೇವಲ ರೈತ ಸಂಘ ಮತ್ತು ನಾಯಕತ್ವ ವಹಿಸಿದರೆ ಗೆಲುವು ಮಾತ್ರವಲ್ಲ ಸಮಸ್ತ ಗ್ರಾಮೀಣ ಬಾಗದ ಜನರ ಗೆಲುವು ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿಹೇಳಿದರು ಅವರು ಗುರುವಾರ ಬೈಂದೂರು ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ವ್ಯವಸ್ಥೆಯಲ್ಲಿ ಜನಸಾಮಾನ್ಯರು ನ್ಯಾಯ ಪಡೆಯಬೇಕಾದರೆ ಹೋರಾಟ ಅನಿವಾರ‍್ಯ.ನ್ಯಾಯಯುತ ಬೇಡಿಕೆಯನ್ನು ಜನಾಗ್ರಹ ಮಾಡಿದಾಗ ಸರಕಾರದ ಸ್ಪಂಧಿಸುತ್ತದೆ ಎನ್ನುವುದು ಬೈಂದೂರು ರೈತರ ಹೋರಾಟ ಸಾಕ್ಷಿಯಾಗಿದೆ.ಟೀಕೆಗಳು, ಅಪವಾದಗಳು ಸಹಜ ಆದರೆ ಗುರಿಮುಟ್ಟಿದಾಗ ಅವೆಲ್ಲವೂ ಗೌಣವಾಗುತ್ತದೆ.ಬೈಂದೂರು ರೈತರ ಗೆಲುವಿನಲ್ಲಿ ಪಕ್ಷಾತೀತವಾಗಿ ಎಲ್ಲಾ ಮುಖಂಡರ ಸಹಕಾರ ಇದೆ.ನಮ್ಮೊಳಗಿನ ರಾಜಕೀಯಗಳೇನೆಯಿದ್ದರು ಕೂಡ ಜನರ ಸಮಸ್ಯೆ ವಿಷಯ ಬಂದಾಗ ಒಗ್ಗೂಡಿ ನ್ಯಾಯ ಒದಗಿಸಬೇಕಿದೆ.ಇಂತಹ ಮಾದರಿ ಹೋರಾಟಕ್ಕೆ ಬೈಂದೂರು ಸಾಕ್ಷಿಯಾಗಿದೆ ಎಂದರು.

ಗೊಂದಲಗಳಿಗೆ ಆಸ್ಪದವಿಲ್ಲ: ರೈತ ಹೋರಾಟದ ಯಶಸ್ಸಿನ ಬಳಿಕ ಕೆಲವು ಕಡೆ ಬಫರ್‌ ಜೋನ್‌ ಸೇರಿದಂತೆ ಕೆಲವು ಗೊಂದಲಗಳು ಕೇಳಿಬರುತ್ತಿದೆ.ಇಂತಹ ಯಾವುದೇ ಗೊಂದಲ ಬೇಡ ರೈತ ಸಂಘ ಇವೆಲ್ಲವನ್ನು ಪರಿಗಣಿಸಿ ಗ್ರಾಮೀಣ ಬಾಗದ ಜನಪರ ನಿಲುವು ಹೊಂದಿದೆ ಎಂದರು.
ರೈತ ಮುಖಂಡ ವೀರಭದ್ರ ಗಾಣಿಗ ಮಾತನಾಡಿ ಬೈಂದೂರಿನ ರೈತರ ಗೆಲುವು ಸಂಘಟನೆಯ ಹೋರಾಟದ ಗೆಲುವಾಗಿದೆ.ಈ ಗೆಲುವು ಸಮಸ್ತ ರೈತ ಬಾಂಧವರ ಪ್ರಯತ್ನದ ಫಲವಾಗಿದೆ.ರೈತಪರ ಸ್ಪಂಧಿಸಿದ ಸರಕಾರ,ಮಂತ್ರಿಗಳು,ಶಾಸಕರು,ಮಾಜಿ ಶಾಸಕರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಸರಕಾರಕ್ಕೆ ರೈತ ಸಂಘ ಅಬಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್‌ ಕುಮಾರ್‌ ಶಿರೂರು,ಪದ್ಮಾಕ್ಷ ಪೂಜಾರಿ ಹಾಜರಿದ್ದರು.

ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

fifteen − eight =