ಬೈಂದೂರು: ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ರಾಮಕ್ಷತ್ರೀಯ ಯುವಕ ಸಮಾಜ ಬೈಂದೂರು ಇದರ 40ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.17 ರಿಂದ 20 ರ ವರೆಗೆ ನಡೆಯಲಿದೆ.
ಅ.17ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ 6 ಗಂಟೆಗೆ ಆಹ್ವಾನಿತ ತಂಡಗಳಿಂದ ಭಜನಾ ಕುಣಿತ ಸ್ಪರ್ಧೆ ನಡೆಯಲಿದೆ.
ಅ.18ರಂದು ಸಂಜೆ 8 ಗಂಟೆಗೆ ನೃತ್ಯ ನಿಕೇತನ ಕೊಡವೂರು ಪ್ರಸ್ತುತಪಡಿಸುವ ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ತಂಡದಿಂದ ನೃತ್ಯ ಸಿಂಚನ ಹಾಗೂ ನವದುರ್ಗೆ ನೃತ್ಯ ರೂಪಕ ನಡೆಯಲಿದೆ.
ಅ.19ರಂದು ಬೆಳಿಗ್ಗೆ ನವಚಂಡಿಕಾ ಯಾಗ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾಮಕ್ಷತ್ರೀಯ ಬಾಂದವರಿಗಾಗಿ ರಾಜ್ಯಮಟ್ಟದ ಸಾಂಸ್ಕ್ರತಿಕ ಕಲರವ ಕ್ಷಾತ್ರ ಸಮ್ಮಿಲನ -2026 ಪ್ರದರ್ಶನಗೊಳ್ಳಲಿದೆ.
ಅ.20 ರಂದು ಸಂಜೆ 6 ಗಂಟೆಗೆ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಪೂಜೆ,ಆಕರ್ಷಕ ಪುರ ಮೆರವಣಿಗೆ,ಆಕರ್ಷಕ ಸ್ತಬ್ದ ಚಿತ್ರಗಳು,ಟ್ಯಾಬ್ಲೋ ಬಳಿಕ ದೇವಸ್ಥಾನದಲ್ಲಿ ವಿಗ್ರಹದ ಜಲಸ್ಥಂಭನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ ಕಲ್ಲುಕಂಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.