ಶಿರೂರು; ಉತ್ಸವಗಳು ಕೇವಲ ನೃತ್ಯ, ಸಂಗೀತ,ಮನೋರಂಜನೆಗಷ್ಟೆಸೀಮಿತವಲ್ಲ ಬದಲಾಗಿ ಆ ಊರಿನ ಸಂಘಟನೆ ,ಅಭಿವೃದ್ದಿ ಚಿಂತನೆ ಹಾಗೂ ಸಾಂಸ್ಕ್ರತಿಕ ಸಂಭ್ರಮವನ್ನು ಬಿಂಬಿಸುತ್ತದೆ ಎಂದು ಲಾವಣ್ಯ ಸಂಸ್ಥೆಯ ಹಿರಿಯ ರಂಗ ಕಲಾವಿದ ಗಣೇಶ ಕಾರಂತ್‌ ಬೈಂದೂರು ಹೇಳಿದರು ಅವರು ರೋಟರಿ ಕ್ಲಬ್‌ ಬೈಂದೂರು,ಜೆಸಿಐ ಶಿರೂರು,ಶಿರೂರುವ ನ್ಯೂಸ್‌ ಡಾಟ್‌ ಕಾಮ್‌ ಎಕ್ತಾ ಇವೆಂಟ್ಸ್‌ ಜನಸ್ನೇಹಿ ಇವೆಂಟ್ಸ್‌ ಇವರ ಸಹಭಾಗಿತ್ವದಲ್ಲಿ ಶಿರೂರು ಹಬ್ಬ -2026 ಇದರ ಎರಡನೇ ದಿನದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಈ ಮಾತುಗಳನ್ನಾಡಿದರು.
ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿಹೊಸ್ಮನೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭೂ ನ್ಯಾಯ ಮಂಡಳಿ ಸದಸ್ಯ ಉದಯ ಪೂಜಾರಿ,ಶಿರೂರು ಜೆಸಿಐ ಪೂರ್ವಾಧ್ಯಕ್ಷ ನಾಗೇಶ ಕೆ,ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಸಿ.ಎನ್‌.ಬಿಲ್ಲವ, ಸಾಮಾಜಿಕ ಹೋರಾಟಗಾರ ಹಾಗೂ ಮುದ್ರಮಕ್ಕಿ ಮಹಾಸತಿ ಯುವಕ ಸಂಘದ ಅಧ್ಯಕ್ಷ ರಾಘು ಶಿರೂರು,ಕೆ.ಡಿ.ಪಿ ಸದಸ್ಯ ಶೇಖರ ಪೂಜಾರಿ ಉಪ್ಪುಂದ,ಶಿಕ್ಷಕ ರಾಮನಾಥ ಮೇಸ್ತ ಶಿರೂರು,ನವೋದಯ ಮೇಲ್ವಿಚಾರಕಿ ವೀರಮ್ಮ ಪೂಜಾರಿ,ಹಿರಿಯ ಯಕ್ಷಗಾನ ಕಲಾವಿದ ಮಹ್ಮದ್‌ ಗೌಸ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಗೀತ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿರೂರು ಹಬ್ಬದ ಆಯೋಜಕರಾದ ಖಲೀಲ್‌ ಕೆರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಿರೀಶ್‌ ಪಿ.ಮೇಸ್ತ ಸ್ವಾಗತಿಸಿದರು.ಬೈಂದೂರು ರೋಟರಿ ಕ್ಲಬ್‌ ಅಧ್ಯಕ್ಷ ಅರುಣ್‌ ಕುಮಾರ್‌ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಶಿರೂರು ಹಬ್ಬದ ಆಯೋಜಕರಾದ ಪ್ರಭಾಕರ ಪೂಜಾರಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

four × one =