ಶಿರೂರು: ಮಾನಸ ಮಿತ್ರ ಮಂಡಳಿ (ರಿ.)ಆಲಂದೂರು ಶಿರೂರು ಇದರ 23ನೇ ವರ್ಷದ ಶಾರದೋತ್ಸವ ಅಪ್ರಮೇಯ -2026 ಕಾರ್ಯಕ್ರಮ ಅ.19 ಹಾಗೂ 20 ರಂದು ಗೌರಿ ರಂಗ ಮಂಟಪ ಆಲಂದೂರಿನಲ್ಲಿ ನಡೆಯಲಿದೆ.
ಅ.19 ರಂದು ಬೆಳಿಗ್ಗೆ ರಂದು ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ಮಹಾಪೂಜೆ,ಭಜನಾ ಕಾರ್ಯಕ್ರಮ,ಮದ್ಯಾಹ್ನ ಅನ್ನಪ್ರಸಾದ ವಿತರಣೆ. ಸಂಜೆ ಮಾನಸ ಮಹಿಳಾ ಮಂಡಳಿ ಸದಸ್ಯರಿಂದ ನವರಾತ್ರಿ ಕನ್ಯಾಪೂಜೆ ರಾತ್ರಿ 7:30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.ರಾತ್ರಿ 9:30ಕ್ಕೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆಇವರಿಂದ ಕಥೆ ಈಗ ಶುರು ನಾಟಕ ಪ್ರದರ್ಶನಗೊಳ್ಳಲಿದೆ.
ಅ.20 ರಂದು ಬೆಳಿಗ್ಗೆ ವಿಜಯದಶಮಿಯ ಅಂಗವಾಗಿ ಉಷಾ ಕಾಲದಲ್ಲಿ ಶ್ರೀದೇವಿಗೆ ಪೂಜೆ,ಮಂಗಳಾರತಿ ಪ್ರಸಾದ ವಿತರಣೆ,ದುರ್ಗಾಹೋಮ ಭಜನಾ ಸಂಕೀರ್ತನೆ ನಡೆಯಲಿದೆ.ಮದ್ಯಾಹ್ನ 12 ಕ್ಕೆ ಪ್ರತಿಭಾ ಸೌರಭ,ನೃತ್ಯ ವೈವಿದ್ಯ,ಸಭಾ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಶ್ರೀದೇವಿಯ ಭವ್ಯ ಪುರವೆರವಣಿಗೆ ಬಳಿಕ ಬಿಂಬದ ಜಲಸ್ಥಂಭನ ನಡೆಯಲಿದೆ ಎಂದು ಮಾನಸ ಮಿತ್ರ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

Leave a Reply

Your email address will not be published. Required fields are marked *

three × 3 =