ಶಿರೂರು: ರೋಟರಿ ಕ್ಲಬ್ ಬೈಂದೂರು,ಜೆಸಿಐ ಶಿರೂರು,ಶಿರೂರು ನ್ಯೂಸ್ ಡಾಟ್ ಕಾಮ್,ಎಕ್ತಾ ಇವೆಂಟ್ಸ್ ಹಾಗೂ ಜನಸ್ನೇಹಿ ಇವೆಂಟ್ಸ್ ಇವರ ಜಂಟಿ ಸಹಯೋಗದಲ್ಲಿ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಐದು ದಿನಗಳ ಶಿರೂರು ಹಬ್ಬ -2026 ರೋಟರಿ ಮಾಜಿ ಗವರ್ನರ್ ಐ.ನಾರಾಯಣ ಉದ್ಘಾಟಿಸಿದರು.
ರೋಟರಿ ಪೂರ್ವಾಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ಸವಗಳು ಊರಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.ಶಿರೂರು ಹಬ್ಬ -2026 ಊರಿನ ಸಂಭ್ರಮವಾಗಿದೆ.ಸಾರ್ವಜನಿಕರು ಸಂಭ್ರಮದಲ್ಲಿ ಭಾಗವಹಿಸಿ ಕೆಲ,ಸಾಹಿತ್ಯ,ವ್ಯಾಪಾರ ಹಾಗೂ ಮಹಿಳೆಯರ ಸ್ವಾವಲಂಬನೆಯ ಉದ್ಯೋಗ ಮೇಳಕ್ಕೆ ಭಾಗವಹಿಸಿ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ ಕುಮಾರ್ ಶಿರೂರು,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕಾಪ್ಸಿ ನೂರ್ಮಹ್ಮದ್,ಕಾಲೇಜಿನ ಉಪಪ್ರಾಂಶುಪಾಲೆ ಜಯಂತಿ ಶೆಟ್ಟಿ,ಕಾಲೇಜಿನ ಎಸ್.ಡಿ.ಎಮ್.ಸಿ ಅಧ್ಯಕ್ಷ ತಾರಿಸುಲ್ಲಾ ಮಹಮ್ಮದ್ ಗೌಸ್,ಉದ್ಯಮಿ ರಘುರಾಮ ಕೆ.ಪೂಜಾರಿ,ಶಿರೂರು ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಶಿರೂರು ಹಬ್ಬದ ಆಯೋಜಕರಾದ ಪ್ರಭಾಕರ ಮಂದಾರ್ತಿ,ರೋಟರಿ ಕ್ಲಬ್ ಕಾರ್ಯದರ್ಶಿ ಮಣಿಕಂಠ ದೇವಾಡಿಗ,ಉದ್ಯಮಿ ಕೃಷ್ಣಮೂರ್ತಿ ಶೇಟ್,ಹರೀಶ್ ಶೇಟ್,ವಿನೋದ ಮೇಸ್ತ,ಸುಶಾಂತ ಆಚಾರ್ಯ ಬೈಂದೂರು,ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ಶಿರೂರು ಹಬ್ಬದ ಆಯೋಜಕರಾದ ಖಲೀಲ್ ಕೆರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಿರೀಶ್ ಮೇಸ್ತ ಸ್ವಾಗತಿಸಿದರು.ಶಿರೂರು ನ್ಯೂಸ್ ಡಾಟ್ ಕಾಮ್ ಸಂಪಾದಕ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ ಶೆಟ್ಟಿಕಾರಿಕಟ್ಟೆವಂದಿಸಿದರು.
ಶಿರೂರು ಹಬ್ಬಕ್ಕೆ ಹರಿದು ಬಂದ ಜನಸಾಗರ: ಶಿರೂರು ಹಬ್ಬದಲ್ಲಿ ಆಹಾರ ಮೇಳ, ಸಸ್ಯ ಮೇಳ,ಮನೋರಂಜನೆಯ ಆಟ,ಮನಸೆಳೆಯುವ ವಸ್ತುಗಳ ನೋಟ,ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ,ಸೀರೆ ಮೇಳ,ಕೃಷಿ ಮೇಳ, ಅಮ್ಯೂಸ್ಮೆಂಟ್ ಪಾರ್ಕ್,ಆಯುರ್ವೇದ ಮತ್ತು ಸ್ವದೇಶಿ ಉತ್ಪನ್ನಗಳು,ಗುಡಿ ಕೈಗಾರಿಕಾ ಉತ್ಪನ್ನಗಳು,ಮಕ್ಕಳಿಗೆ ವಿವಿಧ ಸ್ಪರ್ಧೆಗಳು,ನೃತ್ಯ ವೈವಿದ್ಯಗಳು ಹಾಗೂ ಹತ್ತು ಹಲವು ವೈವಿದ್ಯಗಳನ್ನು ಆಯೋಜಿಸಲಾಗಿತ್ತು.ಮೊದಲ ದಿನವೆ ಜನಸಾಗರ ಹರಿದು ಬಂದಿತ್ತು.ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರದಿ/ಗಿರಿ ಶಿರೂರು
ಚಿತ್ರ: ಪವನ್ ಕುಮಾರ್ ಬಪ್ಪನಬೈಲು