ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡುವಂತೆ ಆಗ್ರಹಿಸಿ ಕಳೆದ 432 ದಿನಗಳಿಂದ ಬೈಂದೂರು ರೈತ ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿಯವರ ನೇತ್ರತ್ವದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಂಗಳವಾರ ಗೆಲುವು ಲಭಿಸಿದೆ.ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿರ್ದೇಶನದಂತೆ ಕರ್ನಾಟಕ ರಾಜ್ಯ ಪೌರಾಡಳಿತ ಸಚಿವರಾದ ಎಚ್.ಸಿ ಬಾಲಕೃಷ್ಣ ಮಂಗಳವಾರ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆದ ರೈತರ ಧರಣಿಗೆ ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರ ಸದಾ ರೈತರ ಪರವಾಗಿದೆ.ಬೈಂದೂರು ಪಟ್ಟಣ ಪಂಚಾಯತ್ ಅವೈಜ್ಞಾನಿಕವಾಗಿ ರೂಪುಗೊಂಡಿದೆ.ರೈತರ ಬೇಡಿಕೆ ನ್ಯಾಯಯುತವಾಗಿದೆ.ರೈತರಿಗೆ ನ್ಯಾಯ ಸಿಗಲು ಇಷ್ಟು ವಿಳಂಬವಾಗಿರುವುದು ವಿಷಾದ.ಹೀಗಾಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧೀಕೃತವಾಗಿ ರಾಜ್ಯದ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಸರಕಾರದ ಪರವಾಗಿ ಘೋಷಣೆ ಮಾಡುತ್ತಿದ್ದೇನೆ.20 ವಾರ್ಡ್‌ಗಳಲ್ಲಿ ಐದು ವಾರ್ಡ್‌ಗಳನ್ನು ಕೈ ಬಿಟ್ಟು ನೂತನ ಪಟ್ಟಣ ಪಂಚಾಯತ್ ಮಾಡಲಾಗುವುದು ಎಂದರು.
ಬೇಡಿಕೆ ಈಡೇರದಿದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ: ನಾನು ಕೇವಲ ರೈತರನ್ನು ಸಮಾಧಾನ ಮಾಡಿಸಲು ಬಂದು ಮಾತನಾಡುತ್ತಿಲ್ಲ.ರಾಜ್ಯದ ಮುಖ್ಯಮಂತ್ರಿಗಳ ಪರವಾಗಿ ಅಧೀಕೃತವಾಗಿ ಘೋಷಣೆ ಮಾಡುತ್ತಿದ್ದೇನೆ.ಆದೇಶವನ್ನು ಗಳನ್ನು ಒಂದೆರಡು ದಿನಗಳಲ್ಲಿ ನೀಡಲಿದ್ದು ಆದೇಶಗಳನ್ನು ಹೊರಡಿಸಿದ್ದು ಸಂಪೂರ್ಣ ಅನುಷ್ಟಾನವಾಗಲು ಒಂದೆರಡು ತಿಂಗಳು ಬೇಕಾಗುತ್ತದೆ ಮತ್ತು ನಾನು ಮಾಡಿರತಕ್ಕಂತ ಈ ಘೋಷಣೆ ಈಡೇರಿಸಲು ಕಂಕಣಬದ್ದನಾಗಿರುತ್ತೇನೆ.ಒಂದೊಮ್ಮೆ ವೃತ್ಯಯವಾದ್ದಲ್ಲಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ನಿಮ್ಮೊಂದಿಗಿರುತ್ತೇನೆ ಎಂದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ ಬೈಂದೂರಿನ ಗ್ರಾಮೀಣ ಭಾಗದಲ್ಲಿ ಐವತ್ತಕ್ಕೂ ಅಧಿಕ ಕಿ.ಮೀ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ಮಾಡಿರುವುದು ತಪ್ಪು ನಿರ್ಧಾರವಾಗಿದೆ.ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರ ಕೂಡ ಒಪ್ಪಿಕೊಂಡಿದೆ.ಹೀಗಾಗಿ ರೈತರು ಇಷ್ಟುದೀರ್ಘಕಾಲ ಹೋರಾಟ ಮಾಡಿರುವುದಕ್ಕೆ ಸರಕಾರದ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಇದು ಪಕ್ಷಾತೀತವಾಗಿ ರೈತಪರ ಬೇಡಿಕೆಯನ್ನು ಸರಕಾರ ಮನ್ನಿಸಿ ಒಂದು ವರ್ಷದ ಹೋರಾಟಕ್ಕೆ ನ್ಯಾಯ ನೀಡುವ ಮೂಲಕ ರಾಜ್ಯ ಸರಕಾರ ರೈತ ಪರವಾಗಿದೆ ಎಂದರು.










ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ,ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್, ಉಪ ತಹಶೀಲ್ದಾರ ರಾಮಚಂದ್ರಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈ ಲ್, ಬೈ.ವ್ಯ,ಸೇ.ಸ.ಸಂಘದ ಅಧ್ಯಕ್ಷ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ,ಖ.ರೈ.ಸೇ.ಸ.ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ,ಹಿರಿಯರಾದ ಕೃಷ್ಣ ದೇವಾಡಿಗ,ಚರ್ಚಿನ ಗುರುಗಳಾದ ಸನ್ನಿ ಫಾದರ್,ಮ್ಯಾಥ್ಯೂ ಕೆ.ಎಸ್,ಪದ್ಮಾಕ್ಷ ಪೂಜಾರಿ ಗೋಳಿಬೇರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರೈತ ಮುಖಂಡರಾದ ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ವೀರಭದ್ರ ಗಾಣಿಗ ವಂದಿಸಿದರು.
ವರದಿ/ಚಿತ್ರ; ಗಿರಿ ಶಿರೂರು