ಶಿರೂರು: ರೋಟರಿ ಕ್ಲಬ್‌ ಬೈಂದೂರು,ಜೆಸಿಐ ಶಿರೂರು,ಶಿರೂರು ನ್ಯೂಸ್‌ ಡಾಟ್‌ ಕಾಮ್‌,ಎಕ್ತಾ ಇವೆಂಟ್ಸ್‌ ಹಾಗೂ ಜನಸ್ನೇಹಿ ಇವೆಂಟ್ಸ್‌ ಇವರ ಜಂಟಿ ಸಹಯೋಗದಲ್ಲಿ ಶಿರೂರು ಹಬ್ಬ -2026 ಅಕ್ಟೋಬರ್‌ 14 ರಿಂದ ಅ.18 ರ ವರೆಗೆ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಶಿರೂರು ಹಬ್ಬದಲ್ಲಿನ ವಿಶೇಷತೆಗಳು: ಶಿರೂರು ಹಬ್ಬದಲ್ಲಿ ಆಹಾರ ಮೇಳ, ಸಸ್ಯ ಮೇಳ,ಮನೋರಂಜನೆಯ ಆಟ,ಮನಸೆಳೆಯುವ ವಸ್ತುಗಳ ನೋಟ,ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ,ಸೀರೆ ಮೇಳ,ಕೃಷಿ ಮೇಳ, ಅಮ್ಯೂಸ್‌ಮೆಂಟ್‌ ಪಾರ್ಕ್,ಆಯುರ್ವೇದ ಮತ್ತು ಸ್ವದೇಶಿ ಉತ್ಪನ್ನಗಳು,ಗುಡಿ ಕೈಗಾರಿಕಾ ಉತ್ಪನ್ನಗಳು,ಮಕ್ಕಳಿಗೆ ವಿವಿಧ ಸ್ಪರ್ಧೆಗಳು,ನೃತ್ಯ ವೈವಿದ್ಯಗಳು ಹಾಗೂ ಹತ್ತು ಹಲವು ವೈವಿದ್ಯಗಳು ನಡೆಯಲಿದೆ.ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

four − three =