ಬೈಂದೂರು: ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ರವರ ವಿಶೇಷ ಮುತುವರ್ಜಿಯಿಂದ ವಾರಕ್ಕೆ ನಾಲ್ಕು ಬಾರಿ ಸಂಚರಿಸುವ ರೈಲಿಗೆ ಬೈಂದೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಿದ್ದು ಮಂಗಳವಾರ ಬೆಳಿಗ್ಗೆ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಕೊಚುವೆಲಿ -ಮುಂಬೈ ಲೋಕಮಾನ್ಯ ತಿಲಕ್ -ಕೊಚುವೆಲಿ ಗರಿಭ್‌ರಥ  ರೈಲಿಗೆ  ಶ್ರೀ ಮೂಕಾಂಬಿಕಾ ರೈಲ್ವೆ ಯಾತ್ರಿಕರ ಸಂಘದ ಪರವಾಗಿ  ಬೈಂದೂರು ರೈಲ್ವೆ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ. ವೆಂಕಟೇಶ್ ಕಿಣಿ,ಅಧ್ಯಕ್ಷ ಜಯಾನಂದ ಹೋಬಳಿದಾರ್ ,ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಉಪಾಧ್ಯಕ್ಷ ಉದಯ್ ಪಡಿಯಾರ್, ಖಜಾಂಚಿ ವಿಜಯ್ ಪೂಜಾರಿ,ಸಂಜಯ್ ಬೈಂದೂರು,ಶಂಕರ್ ಶೇರುಗಾರ್, ಸುಧಾಕರ್ ಎಚ್. ನಾಗರಾಜ ಶೇಟ್, ಶ್ರೀಕುಮಾರ್ ಬೈಂದೂರು,ಬಾಲಕೃಷ್ಣ ಬೈಂದೂರು ಮೊದಲಾದವರು ಹಾಜರಿದ್ದರು.

 

 

Leave a Reply

Your email address will not be published.

13 − five =