ಶಿರೂರು: ಹೊಸೂರು ಮರಾಠಿ ಸಮುದಾಯದ ವತಿಯಿಂದ ಹೋಳಿ ಹುಣ್ಣಿಮೆಯಂದು ಪ್ರಾರಂಭವಾಗುವ ಮರಾಠಿ ಜನಾಂಗದ ಹೋಳಿ ಕುಣಿತ ಹೊಸೂರು,ತೂದಳ್ಳಿ,ಕ್ಯಾರ್ಥೂರು,ಭಟ್ಕಳ ಮುಂತಾದ ಕಡೆಗಳಲ್ಲಿ ಮನೆಮನೆಗೆ ತೆರಳಿ ಸಂಪ್ರದಾಯ ನೆರವೇರಿಸುತ್ತಾರೆ.ಸಾಂಪ್ರಾದಾಯಿಕ ಗ್ರಾಮೀಣ ಕುಣಿತ ಇದಾಗಿದ್ದು 5 ದಿನಗಳ ಕಾಲ ವಿವಿಧ ಭಾಗಗಳಿಗೆ ಸಂಚರಿಸಿ ಹೋಳಿ ಹುಣ್ಣಿಮೆಯಂದು ಸಮಾಪ್ತಿಗೊಳ್ಳಲಿದೆ.ಈ ಸಂದರ್ಭದಲ್ಲಿ ಶಿರೂರು ಜೆಸಿಐ ವತಿಯಿಂದ ಮರಾಠಿ ಸಮುದಾಯದ ಗುರಿಕಾರರಾದ ಗಣೇಶ ಮರಾಠಿ ಯವರನ್ನು ಗೌರವಿಸಲಾಯಿತು.
ಶಿರೂರು ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು,ಪೂರ್ವಾಧ್ಯಕ್ಷರಾದ ಪ್ರಕಾಶ ಮಾಕೋಡಿ,ನಾಗೇಶ ನಾಯ್ಕ,ಸುರೇಶ ಮಾಕೋಡಿ,ಕಾಯ೯ದಶಿ೯ ವಿನೋದ ಮೇಸ್ತ, ಲಕ್ಷ್ಮಿ ನಾಗೇಶ್,ಕೃಷ್ಣ ಪೂಜಾರಿ,ನಾಗಪ್ಪ ಮರಾಠಿ ಹೊಸೂರು,ವಾಸುದೇವ ಮರಾಠಿ ಹಾಗೂ ಮರಾಠಿ ಸಮುದಾಯದ ಸದಸ್ಯರು ಹಾಜರಿದ್ದರು.