ಬೈಂದೂರು: ಶ್ರೀ ಮಹಾಲಿಂಗೇಶ್ವರ ಪ್ರೆಂಡ್ಸ್ ವನಕೊಡ್ಲು -ಗಂಗನಾಡು ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ 8 ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಮಾನ್ಸೂನ್ ಟ್ರೋಪಿ -2026 ಸೀಸನ್ -2 ಗಂಗನಾಡು ಶಾಲಾ ಆವರಣದಲ್ಲಿ ನಡೆಯಿತು.
ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ನಮ್ಮಲ್ಲಿ ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುತ್ತದೆ.ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸೌಹಾರ್ಧತೆಯಿಂದ ಆಡಬೇಕು.ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಹಾಗೂ ಯುವ ಪ್ರತಿಭೆಗಳಿಗೆ ಇಂತಹ ಪಂದ್ಯಾಟಗಳು ಉತ್ತಮ ವೇದಿಕೆಯಾಗಲಿ ಎಂದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ವಾಲಿಬಾಲ್ ಅಂಕಣವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಜು ಬೆಳಗೊಡ್ಲು,ಕುಮಾರ್ ಗಂಗನಾಡು,ಸುಭಾಷ್ ಗಂಗನಾಡು,ಸಂತೋಷ ವನಕೊಡ್ಲು,ಸದಾಶಿವ ವನಕೊಡ್ಲು, ಪ್ರಶಾಂತ ವನಕೊಡ್ಲು,ಸುಮಂತ್ ವನಕೊಡ್ಲು,ಪ್ರಖ್ಯಾತ್ ವನಕೊಡ್ಲು,ಪ್ರಥ್ವಿ,ಪ್ರಜ್ವಲ್ ಗಂಗನಾಡು ಉಪಸ್ಥಿತರಿದ್ದರು.
ಆಯೋಜಕ ರವಿ ಗಂಗನಾಡು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸುರೇಂದ್ರ ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.