ಬೈಂದೂರು,ಸೆ.4: ಬೈಂದೂರಿನ ಸೈಂಟ್ ಥಾಮಸ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ–ಮುದ್ದು ರಾಧೆ’ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು
ಪತ್ರಕರ್ತರು ಹಾಗೂ ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಮುದ್ದುಕ್ರಷ್ಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ ಮಕ್ಕಳ ಕ್ರಿಯಾಶೀಲತೆಗೆ ಮುದ್ದು ಕೃಷ್ಣ ಸ್ಪರ್ಧೆ. ಉತ್ತಮ ಆರಂಭ ನೀಡುತ್ತದೆ. ಭಗವಾನ್ ಕೃಷ್ಣನ ಬಾಲ ಲೀಲೆ ನಮ್ಮೊಳಗಿನ ಭಾವದ ಚೈತನ್ಯಕ್ಕೆ ಸ್ಪೂರ್ತಿ ನೀಡುತ್ತದೆ.ಪಾಲಕರಿಗೆ ಮಕ್ಕಳಲ್ಲಿ ಕ್ರಷ್ಣನನ್ನು ಕಾಣುವ ಸಂತಸವಾದರೆ ಅಷ್ಟಮಿಯ ಕೃಷ್ಣ ಜಾತಿ ಪಂಥದ ಮೇರೆ ಮೀರಿ ಸಮನ್ವಯತೆಯ ಸಂದೇಶ ಸಾರಿದ ಆಚರಣೆ ಎಂದರು.
ಶಾಲೆಯ ಪ್ರಾಂಶುಪಾಲ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.
ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು,ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.