ಬೈಂದೂರು: ಭಾಷೆ, ಸಂಸ್ಕ್ರತಿ, ಪರಂಪರೆಗಳಿಗೆ ಅದರದ್ದೆ ಆದ ಇತಿಹಾಸವಿದೆ.ಭಾಷೆ ಕೇವಲ ಮಾತಿಗೆ ಸೀಮಿತವಾಗಿರುವುದಿಲ್ಲ ಬದಲಾಗಿ ದೈನಂದಿನ ದಿನಚರಿಯ ಅಂಗವಾಗಿದೆ.ಕುಂದಾಪ್ರ ಕನ್ನಡ ನಮ್ಮೆಲ್ಲರ ಬದುಕಾಗಿದೆ. ತಲೆಮಾರುಗಳಿಂದ ಬಂದ ಸಂಪ್ರದಾಯ ಆಚರಣೆಗಳು ಮುಂದಿನ ತಲೆಮಾರುಗಳಿಗೆ ತಲುಪಿದಾಗ ಭಾಷೆಯ ಸೊಗಡು ಸದಾ ಚೈತನ್ಯ ಹೊಂದಿರುತ್ತದೆ.ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ಅನಾವರಣಗೊಂಡ ಕುಂದಾಪ್ರ ಸಂಸ್ಕ್ರತಿ ಜೋಡಣೆ ಇತರ ಕಡೆಗಳಿಗೂ ಮಾದರಿಯಾಗಿದೆ. ನಮ್ಮ ಸಂಪ್ರದಾಯದ ಆಚರಣೆ ಸಾಹಿತ್ಯ ಭಾಷೆಗೆ ಪೂರಕವಾಗಿರುವ ಅಂಶಗಳು ದಾಖಲೆಯಾಗಿ ಉಳಿಸಿಕೊಳ್ಳಬೇಕಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು ಅವರು ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಯಡ್ತರೆ ನೆಲ್ಯಾಡಿ ಬೈಲ್‌ನಲ್ಲಿ ಆಯೋಜಿಸಿದ ಕೆಸ್ರಲ್ಲೊಂದಿನ ಗಮ್ಮತ್ತ್ ಕಾರ್ಯಕ್ರಮದ ಸಮಾರೋಪ ಸಮಾರಂಬದಲ್ಲಿ ಸನ್ಮಾನ ಸ್ವೀಕರಿಸಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳೆ,ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ, ಚಿತ್ರನಟ ಶೈನ್ ಶೆಟ್ಟಿ ,ಚಿತ್ರನಟಿ ತನ್ವಿರಾಮ್, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ, ಯು. ರಾಜೇಶ ಕಾರಂತ್,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ಟಾಡಿ, ನೆಲ್ಯಾಡಿ ದಿವಾಕರ ಶೆಟ್ಟಿ ,ಯು. ಸಂದೇಶ ಭಟ್ ಉಪ್ಪುಂದ,ನಿವೃತ್ತ ಶಿಕ್ಷಕ ಆನಂದ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಸ್ವಾಗತಿಸಿದರು.ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಕುಂದಾಪ್ರ ಡಾಟ್ ಕಾಮ್ ಸಂಪಾದಕ ಸುನೀಲ್ ಹೆಚ್.ಜಿ.ಬೈಂದೂರು ವಂದಿಸಿದರು.