ಬೈಂದೂರು: ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕು ಇದರ ವತಿಯಿಂದ 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ, ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಮತ್ತೆಂದೂ ಅಂತಹ ದುರಂತಗಳು ಮರುಕಳಿಸದಂತೆ ಜಾಗೃತೆ ವಹಿಸಿ ಜಾಗರಣಾ ಮಾಡುವ ಸಂಕಲ್ಪದೊಂದಿಗೆ ಅಖಂಡ ಭಾರತ ಸಂಕಲ್ಪದಿನ ಪಂಜಿನ ಮೆರವಣಿಗೆ ಬೈಂದೂರಿನಲ್ಲಿ ನಡೆಯಿತು.

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಹಿಂದೂ ಸಂಘಟನೆಗಳ ಪ್ರಮುಖರು.ದೇಶಪ್ರೇಮಿ ಯುವಕರು ಹಾಗೂ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ರಾಷ್ಟ್ರೀಯತೆಯ ಸಂದೇಶ ಸಾರಿದ್ದು ಅತ್ಯಂತ ಹೆಮ್ಮೆಯ ವಿಷಯ.ದೇಶದ ಅಖಂಡತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯಲು ಯುವಜನತೆ ಸದಾ ಮುಂಚೂಣಿಯಲ್ಲಿರಬೇಕು.ಈ ನಿಟ್ಟಿನಲ್ಲಿ ಆಯೋಜಿತವಾದ ಈ ಕಾರ್ಯಕ್ರಮವು ಯುವಮನಸ್ಸುಗಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹೆಚ್ಚಿಸಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,ವಕೀಲರಾದ ನಾಗರಾಜ್ ಗೋಳಿಹೊಳೆ,ವಿಭಾಗ ಪ್ರಮುಖರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ಕೇಶವ ಬಂಗೇರ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ,ಜಯಾನಂದ ಹೋಬಳಿದಾರ್,ಪ್ರಧಾನ ಕಾರ್ಯದರ್ಶಿ ಗೋಪಾಲ ವಸ್ರೆ ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ಬಂಕೇಶ್ವರ ಮಹಾಕಾಳಿ ದೇವಸ್ಥಾನದಿಂದ ಬೈಂದೂರು ಸೇನೇಶ್ವರ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಯಿತು.

 

Leave a Reply

Your email address will not be published. Required fields are marked *

two × two =