ಬೈಂದೂರು,ಆ.14: ಕಳೆದ ಹಲವು ವರ್ಷಗಳಿಂದ ಕಸ್ತೂರಿರಂಗನ್‌ ವರದಿ ಆತಂಕ ಮಲೆನಾಡು ಭಾಗದ ಮತ್ತು ಕರಾವಳಿ ರೈತರನ್ನು ಕಾಡುತ್ತಿದೆ. 2013 ರಿಂದ ಇಲ್ಲಿಯವರೆಗೆ ಏಳು ಅಧಿಸೂಚನೆ ಬಂದಿದೆ.ಕೇರಳ,ಗುಜರಾತ್‌ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರ ಪ್ರತ್ಯೇಕ ಸರ್ವೆ ನಡೆಸಿ ಕೇವಲ ದಟ್ಟಕಾಡುಗಳಿರುವ ಜಾಗನ್ನು ಮಾತ್ರ ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೆ ಅವಕಾಶಕೊಟ್ಟಿದೆ.ಆದರೆ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಯಲ್ಲಿ ಯಾವ ಜನನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಗ್ರಾಮೀಣ ಭಾಗದ ರೈತರ ಈ ಆತಂಕಕ್ಕೆ ಜನಪ್ರತಿನಿಧಿಗಳೆ ನೇರ ಹೊಣೆ ಎಂದು ಹಿರಿಯ ವಕೀಲರಾದ ಟಿ.ಬಿ ಶೆಟ್ಟಿಹೇಳಿದರು ಅವರು ಗುರುವಾರ ಬೈಂದೂರು ರೈತ ಸಂಘದ ವತಿಯಿಂದ ಬೈಂದೂರು ರೋಟರಿ ಭವನದಲ್ಲಿ ನಡೆದ ಕಸ್ತೂರಿರಂಗನ್‌ ವರದಿ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿ ಕೇರಳದಲ್ಲಿ ಆರಂಭದಲ್ಲಿ 13108 59 ಕಿ.ಮೀ ಅಧಿಸೂಚನೆ ಬಂದಿದ್ದು ಬಳಿಕ ರಾಜ್ಯ ಸರಕಾರ ಅದನ್ನು 9993 ಕಿ.ಮೀ ಇಳಿಸಿದೆ.ಗುಜರಾತ್‌ ಕೇವಲ 490.59 ಕಿ.ಮೀ ಮಾತ್ರ ಒಳಪಟ್ಟಿದೆ.ಗೋವಾ 1461 ಕಿ.ಮೀ ಆದರೆ ಕರ್ನಾಟಕದಲ್ಲಿ 20668 ಚ.ಕಿ.ಮೀ ಒಳಪಟ್ಟಿದೆ.ಯಾವ ಹಂತದಲ್ಲೂ ಇದಕ್ಕೆ ಆಕ್ಷೇಪ ಸಲ್ಲಿಕೆಯಾಗಿಲ್ಲ. ಹೀಗಾಗಿ ಕರಾವಳಿ ಭಾಗದ ಜನಪ್ರತಿನಿಧಿಗಳ ಪಕ್ಷಬೇದ ಮರೆತು ರಾಜ್ಯ ಸರಕಾರದ ಗಮನ ಸೆಳೆದು ಭೌತಿಕ ಸರ್ವೆ ಕಾರ್ಯ ನಡೆಸಿದಾಗ ಮಾತ್ರ ಗ್ರಾಮೀಣ ಭಾಗಗಳು ಉಳಿಯಲಿದೆ ಎಂದರು.

ಕಸ್ತೂರಿರಂಗನ್‌ ಸಾಧಕ -ಬಾಧಕ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು. ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್‌.ರಾಜು ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಪಟ್ಟಣ ಪಂಚಾಯತ್‌ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ ಉಪಸ್ಥಿತರಿದ್ದರು.

ವೀರಭದ್ರ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರೈತ ಮುಖಂಡ ಅರುಣ್ ಕುಮಾರ್ ಶಿರೂರು ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

four × three =