ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಆನ್‌ಲೈನ್ ಕುಂದಾಪ್ರ ಕನ್ನಡ ದಿನಾಚರಣೆ ಆಚರಿಸಲಾಯಿತು. ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಅಧ್ಯಕ್ಷ ಎನ್.ಎ.ರಮಾನಂದ ಪ್ರಭು ಮತ್ತು ಸದಸ್ಯರು ಓಮನ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕುಂದಾಪುರ ಶಾಸಕ ಕಿರಣ ಕೊಡ್ಗಿ ಕುಂದಾಪುರ ಭಾಷೆ ನಮ್ಮೊಳಗಿನ ಬದುಕಾಗಿದೆ.ಕೇವಲ ಸಂವಹನಕ್ಕೆ ಸೀಮಿತವಾಗದೆ ಭಾವನೆಗಳ ಅರ್ಥ ಹೊಂದಿದೆ.ಜಾಗತಿಕ ಮಟ್ಟದಲ್ಲಿ ಕುಂದಗನ್ನಡಿಗರನ್ನು ಒಗ್ಗೂಡಿಸಿ ನಡೆಯುವ ಈ ಕಾರ್ಯಕ್ರಮ ಕುಂದಾಪ್ರ ಕನ್ನಡವನ್ನು ಜಗದಗಲ ಪಸರಿಸಿದ ಸಾರ್ಥಕತೆ ಕಾಣುತ್ತಿದೆ ಎಂದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಅಧ್ಯಕ್ಷ ಸಿ.ಎ ರಮಾನಂದ ಮಾತನಾಡಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಶೈಕ್ಷಣಿಕ ಪ್ರೋತ್ಸಾಹ, ವಿದ್ಯಾರ್ಥಿವೇತನ ಮತ್ತು ಗಲ್ಪ್ ರಾಷ್ಟ್ರದಲ್ಲಿ ತೊಂದರೆಯಾದ ನೂರಾರು ಕುಂದ ಕನ್ನಡಗರಿಗೆ ನಿರಂತರ ಸಹಕಾರದ ನೆರವು ನೀಡುತ್ತಿದೆ ಮತ್ತು ಜಾಗತಿಕ ಮಟ್ಟದಲ್ಲಿ ಕುಂದಾಪ್ರ ಭಾಷಿಗರನ್ನು ಒಗ್ಗೂಡಿಸಲು ಪ್ರಯತ್ನ ನಡೆಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಮಹಾಪೋಷಕರಾದ ವರದರಾಜ್ ಶೆಟ್ಟಿ,ಪೋಷಕರಾದ ಪ್ರವೀಣ ಕುಮಾರ್ ಶೆಟ್ಟಿ ವಕ್ವಾಡಿ,ಹಿರಿಯ ಸಾಹಿತಿ ಎ.ಎಸ್.ಎನ್.ಹೆಬ್ಬಾರ್,ಡಾ.ಆನಂದ ಉಪಾಧ್ಯಾಯ ಓಮನ್,ಚಿತ್ರ ನಿರ್ಮಾಪಕ ಗುರುದತ್ತ ಗಾಣಿಗ,ವಸಂತ ಗಿಳಿಯಾರ್,ರಾಜೇಶ ಕೆ.ಸಿ,ಅರುಣ್ ಕುಮಾರ್ ಶಿರೂರು,ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಉಪಾಧ್ಯಕ್ಷ ಸುಜಿತ್ ಶೆಟ್ಟಿ,ಸಂತೋಷ ಶೆಟ್ಟಿ ಆರ್ಡಿ,ಸುಬ್ರಹ್ಮಣ್ಯ ಹೆಬ್ಬಾಗಿಲು ಬಹರೈನ್,ಸುರೇಶ ರಾವ್ ನೇರಂಬಳ್ಳಿ ಕುವೈಟ್,ಪ್ರಕಾಶ ನಾಯರ್,ವಾಸು ದೇವಾಡಿಗ,ಶೀನ ದೇವಾಡಿಗ ಸೇರಿದಂತೆ ವಿವಿಧ ದೇಶದ ಗಣ್ಯರು ಭಾಗವಹಿಸಿದ್ದರು.
ನಮ್ಮ ಕುಂದಾಪ್ರ ಬಳಗದ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸುಬ್ರಹ್ಮಣ್ಯ ಜಿ.ಉಪ್ಪುಂದ ಹಾಗೂ ರೋನಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಸುಧಾಕರ ಪೂಜಾರಿ ವಂದಿಸಿದರು.