ಶಿರೂರು: ರೋಟರಿ ಕ್ಲಬ್ ಬೈಂದೂರು ಇದರ ವತಿಯಿಂದ ಗ್ರಾಮೀಣ ಭಾಗವಾದ ಆಲಂದೂರು ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣಾ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯತು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಸರಕಾರ ವಿಶೇಷವಾದ ಕಾಳಜಿ ವಹಿಸಿದೆ.ಇದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ದೊರೆತಾಗ ಉತ್ತಮ ಸಾಧನೆ ಸಾಧ್ಯ. ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿನ್ನಿ ಫೆರ್ನಾಂಡಿಸ್,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಅಶ್ವಿನಿ ಕೊಠಾರಿ,ಶಾಲಾಭಿವೃದ್ದಿ ಸಮಿತಿಯ ಚಂದ್ರ ಕೊಠಾರಿ,ಪ್ರವೀಣ ಶೆಟ್ಟಿ,ಶಿಲ್ಪಾ ಅವಭೃತ,ಮಮತಾ ಪೂಜಾರಿ,ಹರೀಶ ಪೂಜಾರಿ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.