ಬೈಂದೂರು: ಯಾವುದೇ ವ್ಯಕ್ತಿ, ಸಂಸ್ಥೆಯಾಗಿದ್ದರೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೇ ಧೀರ್ಘಾವಧಿಯಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಸ್ವಾಭಿಮಾನ ಹಾಗೂ ಬದ್ಧತೆಯೊಂದಿಗೆ ಮುನ್ನಡೆಯುವುದು ಕಷ್ಟಸಾಧ್ಯವಾದರೂ, ಎದುರಿಸಿ ಸಾಗುವುದರಲ್ಲಿಯೇ ಬದುಕಿನ ಯಶಸ್ಸಿದೆ.ಯಕ್ಷಗಾನ ಒಂದು ಶ್ರೇಷ್ಟಕಲೆ ಸಂಸ್ಕ್ರತಿಯ ಪ್ರತೀಕವಾಗಿದೆ.ಕರಾವಳಿ ಭಾಗದಲ್ಲಿ ಹತ್ತಾರು ಯಕ್ಷಗಾನ ಮೇಳಗಳು ಕಲಾ ಸೇವೆ ನಡೆಸುತ್ತಿದ್ದು ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಕಲಾ ತಂಡಗಳಿಗೆ ಕಲಾಭಿಮಾನಿಗಳ ಸಹಕಾರ ಮುಖ್ಯ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು ಅವರು ರೋಟರಿ ಕ್ಲಬ್ ಬೈಂದೂರು, ಕುಂದಾಪ್ರ ಡಾಟ್ ಕಾಂ – ಅಂತರ್ಜಾಲ ಸುದ್ದಿತಾಣ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪುö್ಪಂದ ಇವರ ಆಯೋಜನೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ ವಿಶೇಷ ಯಕ್ಷಗಾನ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿ ಮಳೆಗಾದಲ್ಲಿ ಯಕ್ಷಗಾನ ಕಲಾವಿದರಿಗೆ ನೆರವಾಗು ಉದ್ದೇಶದಿಂದ ಕೆಲವು ವರ್ಷಗಳಿಂದ ಬೈಂದೂರು ಭಾಗದಲ್ಲಿ ಒಂದು ಪ್ರದರ್ಶನ ಆಯೋಜಿಸುತ್ತಿರುವುದು ಶ್ಲಾಘನಾರ್ಹ ಎಂದರು.ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಮಾತನಾಡಿ ಬೈಂದೂರಿನಲ್ಲಿ ಕಲಾವಿದರು ಹಾಗೂ ಕಲಾ ಪ್ರೋತ್ಸಾಹಕರು ಇರುವುದರಿಂದ ಉತ್ತಮ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆಯಾಗುತ್ತಿದೆ. ಇದು ಸಾಂಸ್ಕ್ರತಿಕವಾಗಿ ಊರನ್ನು ಸಮೃದ್ಧಗೊಳಿಸಿದೆ ಎಂದರು.
ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರೋಟರಿ ಝೋನ್-1ರ ಸಹಾಯಕ ಗವರ್ನರ್ ಐ. ನಾರಾಯಣ್, ಸುರಭಿ ರಿ. ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ, ಲಾವಣ್ಯ ರಿ. ಬೈಂದೂರು ಕಾರ್ಯದರ್ಶಿ ಎಚ್. ಉದಯ್ ಆಚಾರ್ಯ, ಹಟ್ಟಿಯಂಗಡಿ ಮೇಳದ ಯಜಮಾನರಾದ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ. ಬೈಂದೂರು ರೋಟರಿ ಕಾರ್ಯದರ್ಶಿ ಎಸ್. ಮಣಿಕಂಠ ದೇವಾಡಿಗ ವಂದಿಸಿದರು.