ಬೈಂದೂರು: ನಾವು ಶಕ್ತಿಯುತರಾದಾಗ ಸಂಘಟನೆಯು ಬಲಯುತವಾಗಿರುತ್ತದೆ. ಸಂಘಟನೆಯಲ್ಲಿ ಇರುವ ಜೊತೆಗೆ ಸಮಾಜದ ಕಾರ್ಯದಲ್ಲೂ ನಾವು  ತೊಡಗಿಸಿಕೊಳ್ಳಬೇಕಾಗಿದೆ. ಎಲ್ಲಾ ವಲಯದ ಸದಸ್ಯರು ಒಗ್ಗಟ್ಟಾಗಿ ಸಂಘಟಿತರಾಗಿದ್ದಾಗ ಸಂಸ್ಥೆ ಇನ್ನಷ್ಟು ಬೆಳೆಯಲು ಸಾಧ್ಯವಿದೆ. ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ವಾಹನವನ್ನು ಬಳಸುತ್ತೇವೆ. ಆದರೆ ನಾವು ಬಳಸುವ ವಾಹನವು ಉತ್ತಮ ಗುಣಮಟ್ಟದ ಸಾಮರ್ಥ್ಯವನ್ನು ಹೊಂದಬೇಕಾದರೆ ಗ್ಯಾರೇಜ್ ಮಾಲಕರು  ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ನಮ್ಮ ಯಾಂತ್ರೀಕೃತ ಬದುಕಿನಲ್ಲಿ ಗ್ಯಾರೇಜ್ ಮಾಲಕರು ಬಹಳಷ್ಟು ಪ್ರಭಾವ ಬೀರಿದ್ದಾರೆ.ಗ್ರಾಹಕರಿಗೆ ತಮ್ಮ ವಾಹನವನ್ನು ಕ್ಲಪ್ತ ಸಮಯದಲ್ಲಿ ರಿಪೇರಿಗೊಳಿಸುವ ಮೂಲಕ ಸ್ಪಂದನೆ ನೀಡುತ್ತಾ ಗ್ರಾಹಕ ಸ್ನೇಹಿಯಾಗಬೇಕು. ಸಂಘದಲ್ಲಿ ಸದಸ್ಯತನದ ಹೆಚ್ಚಳವಾಗುವತ್ತ ಶ್ರಮಿಸಬೇಕು.ವೃತ್ತಿ ಬಾಂಧವರು ಕಷ್ಟದಲ್ಲಿದ್ದಾಗ ಕೂಡಲೇ ಸ್ಪಂದಿಸುವ ಮನೋಭಾವ ನಮ್ಮಲಿರಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು ಅವರು ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆದ ಬೈಂದೂರು ತಾಲೂಕು ಗ್ಯಾರೇಜು ಮಾಲಕರ ಸಂಘ(ರಿ.) ಬೈಂದೂರು ಇದರ ಷೋಡಷ ಮಹೋತ್ಸವದ 16ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಬೈಂದೂರು ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ವಿ.ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರಿಕ್ಷಾ,ಟೆಂಪೂ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಬಟ್ವಾಡಿ ಶುಭಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಕಾರ್ಮಿಕ ಅಧಿಕಾರಿ ಉಡುಪಿ ಉಪವಿಭಾಗದ ಕಮಲಷಾ ಅಲ್ತಾಫ್ ಅಹಮ್ಮದ್,ಕುಂದಾಪುರ ಕಾರ್ಮಿಕ ನಿರೀಕ್ಷಕ ವಿಜೇಂದ್ರ, ಬೈಂದೂರು ಆರಕ್ಷಕ ಇಲಾಖೆಯ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ,ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ,ಬ್ರಹ್ಮಾವರ ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಉಪಾಧ್ಯಕ್ಷ ಸದಾನಂದ ಆಚಾರ್ಯ , ಕಾರ್ಯದರ್ಶಿ ಎಸ್.ಸಂಜೀವ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಮಣಿಪಾಲ, ಕುಂದಾಪುರ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಆಚಾರ್,ಬೈಂದೂರು ಕ್ಲೀನ್ ಕಿನಾರ ತಂಡದ ಸಂಯೋಜಕ ರಾಘವೇಂದ್ರ ಪಡುವರಿ ಹಾಗೂ ಗೋರಕ್ಷಕರಾದ ಎಸ್.ಸಂಜೀವ ದೇವಾಡಿಗ ರವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಬೈಂದೂರು ತಾಲೂಕು ಗ್ಯಾರೇಜು ಸಂಘದ ಜೊತೆ ಕಾರ್ಯದರ್ಶಿ ನಾಗರಾಜ್ ಆಚಾರ್ಯ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಆನಂದ ಮದ್ದೋಡಿ ಹಾಗೂ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಅಣ್ಣಪ್ಪಯ್ಯ ಆಚಾರ್ಯ ಕಳವಾಡಿ ವಂದಿಸಿದರು.

ವರದಿ/ಗಿರಿ ಶಿರೂರು

ಚಿತ್ರ: ವಿಶ್ವನಾಥ ಆಚಾರ್ಯ ಬೈಂದೂರು

 

Leave a Reply

Your email address will not be published. Required fields are marked *

18 + sixteen =