ಬೈಂದೂರು: ಜೆಸಿಐ ಇಂಡಿಯಾ ವಲಯ 15ರ ವಲಯಾಡಳಿತ ಮಂಡಳಿಗೆ ಜೆಸಿಐ ಉಪ್ಪುಂದ ಸುಪ್ರಿಂ ಘಟಕದ 2024ರ ಅಧ್ಯಕ್ಷೆ ಸುಮಾ ಆಚಾರ್ 2026ನೇ ಸಾಲಿನ ಉದಕ ಪತ್ರಿಕೆ ಎಡಿಟರ್ ಆಗಿ ನೇಮಕಗೊಂಡಿದ್ದಾರೆ. ವಿಠಲ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ನಡೆದ ಜೆಸಿಐ ಇಂಡಿಯಾ ವಲಯ 15ರ ನೂತನ ವಲಯಾಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ನೂತನ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಸುಮಾ ಆಚಾರ್‌ಗೆ ಅಧಿಕೃತ ನೇಮಕಾತಿ ಪತ್ರ ವಿತರಿಸಿ ಪ್ರಮಾಣವಚನ ಬೋಧಿಸಿದರು.