ಬೈಂದೂರು; ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ಆಡಳಿತ ಸೌಧದ ಎದರು ನಡೆಯುತ್ತಿರುವ ಅನಿರ್ಧಿಷ್ಟಾವಧಿ  ಧರಣಿ 260 ನೇ ದಿನಕ್ಕೆ ಕಾಲಿಟ್ಟಿದೆ.ಬುಧವಾರ ಸಮಾಲೋಚನಾ ಸಭೆ ಹಾಗೂ ಮುಂದಿನ ಹೋರಾಟ ಕುರಿತು ಪೂರ್ವಭಾವಿ ಸಭೆ ನಡೆಸಿದ ರೈತರು ನೇರವಾಗಿ  ಬೈಂದೂರು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು ಕಛೇರಿ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ ಹೋರಾಟಕ್ಕೆ ಒಂದು ವರ್ಷ ಸಮೀಪಿಸಿದರು ಕೂಡ ಸರಕಾರ ಇಲಾಖೆ ಜನಪ್ರತಿನಿಧಿಗಳು ರೈತರಿಗೆ ನ್ಯಾಯ ಕೊಟ್ಟಿಲ್ಲ.ರೈತರ ನೋವಿಗೆ ಬೆಲೆ ಇಲ್ಲದಂತೆ ವರ್ತಿಸುತಿದ್ದಾರೆ ನಮ್ಮ ಹೋರಾಟ ನ್ಯಾಯ ಸಿಗುವ ವರಗೆ ಮುಂದುವರಿಯುತ್ತದೆ ಒಂದು ತಿಂಗಳ ಒಳಗೆ ಗ್ರಾಮೀಣ ಭಾಗದ ಸಾವಿರಾರು ಜನರು ವಿಷದ ಬಾಟಲಿ ಹಿಡಿದು ಬರುತ್ತೇವೆ ನ್ಯಾಯ ಪಡೆಯಲು ಪ್ರಾಣ ತ್ಯಾಗಕ್ಕೂ ಸಿದ್ದ ಎಂದರು.
ಅಸ್ವಸ್ಥಗೊಂಡ ರೈತ ಮುಖಂಡ ದೀಪಕ್ ಕುಮಾರ ಶೆಟ್ಟಿ; ಹೋರಾಟದ ಕಿಚ್ಚು ಹೆಚ್ಚಿ ರೈತರ ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.ಈ ಸಂಧರ್ಭದಲ್ಲಿ ರೈತರಿಗೆ ಅನಗತ್ಯ ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೇಳೆ ದೀಪಕ್ ಕುಮಾರ ಶೆಟ್ಟ ಎದೆ ನೋವು ಬಂದು ಅಸ್ವಸ್ಥರಾದರು. ಈ ಸಂಧರ್ಭದಲ್ಲಿ ಕೆಲಹೊತ್ತು ಆತಂಕದ ಪರಿಸ್ಥಿತಿ ಉಂಟಾಯಿತು ಬಳಿಕ ಆರೋಗ್ಯ ಇಲಾಖೆ ಸಿಬಂಧಿಗಳು ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದರು.
ಒಂದು ವಾರದ ಒಳಗೆ ಸ್ಪಷ್ಟ ಮಾಹಿತಿ :ತಹಶೀಲ್ದಾರ್; ರೈತರ ಬೇಡಿಕೆ ಆಲಿಸಿದ ತಹಶೀಲ್ದಾರ ಡಿ.ಜಿ. ಮಹಾತ್  ಮಾತನಾಡಿ ರೈತರ ಹೋರಾಟದ ಗಂಭೀರತೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಸರಕಾರದ ಗಮನಕ್ಕೆ ತರುತ್ತೆವೆ ಒಂದು ವಾರದ ಒಳಗೆ. ರೈತರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೈಂದೂರು ರೈತ ಸಂಘದ ಕಛೇರಿಯಿಂದ ತಾಲೂಕು ಆಡಳಿತ ಸೌಧದ ಕಛೇರಿಯವರೆಗೆ ಜಾಥಾ ನಡೆಸಿ ಬಳಿಕ ತಹಶೀಲ್ದಾರರವರಿಗೆ ಮನವಿ ಮಾಡಿಕೊಳ್ಳಲಾಯಿತು.

ಹಿರಿಯರಾದ ಕೃಷ್ಣ ದೇವಾಡಿಗ,ದೇವಪ್ಪ ಮರಾಠಿ,ರೈತ ಹೋರಾಟಗಾರರಾದ ಅರುಣ್ ಕುಮಾರ್ ಶಿರೂರು,ಪದ್ಮಾಕ್ಷ ಗೋಳಿಬೇರು,ಥೋಮಸ್ ಮಾಸ್ಟರ್,ಬೈಂದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ,ಸುಧಾಕರ ಶೆಟ್ಟಿ ನೆಲ್ಯಾಡಿ,ಪೌಲೂಸ್ ಹಾಗೂ ನೂರಾರು ರೈತರು ಹಾಜರಿದ್ದರು.
ರೈತ ಮುಖಂಡ ವೀರಭದ್ರ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸುಭಾಷ್ ಗಂಗನಾಡು ವಂದಿಸಿದರು.
ವರದಿ/ಚಿತ್ರ; ಗಿರಿ ಶಿರೂರು

Leave a Reply

Your email address will not be published. Required fields are marked *

9 + 18 =