ಬೈಂದೂರು,ಜೂ.8: ಸಮಾಜಕೀಯ ಸೇನೆಯ ನೇತ್ರತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದಲ್ಲಿ 108 ಆಂಬ್ಯುಲೆನ್ಸ್‌ ಸೇವೆ ಸರಿಪಡಿಸಲು ಆಗ್ರಹಿಸಿ ಸೋಮವಾರ ಬೈಂದೂರು ತಾಲೂಕು ಆಡಳಿತದ ಸೌಧದ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಮಾಜಕೀಯ ಸೇನೆಯ ಸ್ಥಾಪಕ ಸೈನಿಕ ಕೃಷ್ಣ ಪೂಜಾರಿ ಮಾತನಾಡಿ ಗ್ರಾಮೀಣ ಭಾಗವಾಗಿರುವ ಬೈಂದೂರಿನಲ್ಲಿ ಸರಕಾರಿ ಸೇವೆ ಹಳಿ ತಪ್ಪಿದೆ.ಅದರಲ್ಲೂ ಆಂಬ್ಯುಲೆನ್ಸ್‌ ಸೇವೆ ಹಳ್ಳಿ ಭಾಗದ ಜನರಿಗೆ ಸಿಗುತ್ತಿಲ್ಲ.ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸರಕಾರಿ ಅಧಿಕಾರಿಗಳು ಜನರ ಸೇವೆ ಮಾಡಲು ನಿಯುಕ್ತಿಗೊಂಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಪಘಾತ ಸಂಭವಿಸಿದಾಗ ಆಂಬ್ಯುಲೆನ್ಸ್‌ ಸೇವೆ ಬಹುಮುಖ್ಯ ಆದರೆ ಬೈಂದೂರು ವ್ಯಾಪ್ತಿಯಲ್ಲಿ ಖಾಸಗಿ ಲಾಬಿಗೆ ಸರಕಾರಿ ಆಸ್ಪತ್ರೆ ಕೈಜೋಡಿಸುತ್ತಿದೆ.ತಕ್ಷಣ ಈ ವ್ಯವಸ್ಥೆ ಸರಿಪಡಿಸಬೇಕು ಎಂದರು.

ಸ್ಥಳದಲ್ಲೆ ಅಣುಕು ಪ್ರದರ್ಶನ, ಕಂಗಾಲಾದ ಆರೋಗ್ಯ ಇಲಾಖೆ: ಪ್ರತಿಭಟನೆ ನಡೆಸುವವರು ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸುವಾಗ ಸ್ಥಳದಲ್ಲೆ ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಿ ಎರಡು ದಿನದ ಹಿಂದೆ ಈ ವ್ಯವಸ್ಥೆ ಸರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಪ್ರತಿಭಟನಕಾರರು ಆಗ್ರಹಿಸಿ ಸ್ಥಳದಲ್ಲೆ 108 ಕ್ಕೆ ಕರೆ ಮಾಡಲಾಯಿತು.ಸನಿಹದಲ್ಲೆ ಆಸ್ಪತ್ರೆ ಇದ್ದರು ಸ್ಥಳಕ್ಕೆ ಬರಲು 20 ನಿಮಿಷ ತೆಗೆದುಕೊಂಡಿತು.ಇದರಿಂದ ಸ್ಥಳದಲ್ಲಿದ್ದ ಅಧಿಕಾರಿಗಳು ಮುಜುಗರಕ್ಕೊಳಗಾಗುವಂತೆ ಮಾಡಿತು.ಹಾಗೂ ಮುಂದಿನ ದಿನದಲ್ಲಿ ವ್ಯವಸ್ಥೆ ಸರಿಪಡಿಸಬೇಕೆನ್ನುವುದಾಗಿ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್‌ ಹುಬ್ಭಳ್ಳಿ ಮನವಿ ಸ್ವೀಕರಿಸಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ,ಕರ್ನಾಟಕ ಕಾರ್ಮಿಕ ಪರಿಷತ್‌ ಅಧ್ಯಕ್ಷ ರವಿ ಶೆಟ್ಟಿ,ಬೈಂದೂರು ತಹಶೀಲ್ದಾರ ಡಿ.ಜಿ.ಮಹಾತ,ಸಮಾಜಸೇನೆಯ ಹರ್ಷ,ರಾಘವೇಂದ್ರ ಹೇರಂಜಾಲು,ಮಣಿರಾಜ್ ಹೇರಂಜಾಲು, ತೃಪ್ತಿ ಶೆಟ್ಟಿ ,ಗೌರಿ ದೇವಾಡಿಗ,ಗಣೇಶ ಪೂಜಾರಿ ಮೊದಲಾದವರು ಹಾಜರಿದ್ದರು.

 

 

Leave a Reply

Your email address will not be published. Required fields are marked *

15 − ten =