ಶಿರೂರು; ಶಿರೂರಿನ ಯಕ್ಷ ಸಂಘಟಕ ದೀಪಕ್‌ ಕುಮಾರ್‌ ಶೆಟ್ಟಿಕರಾವಳಿ ಇವರ ಸಂಯೋಜನೆಯಲ್ಲಿ ಶಿರೂರು ಗಾಂಧಿ ಮೈದಾನದಲ್ಲಿ ಪೆರ್ಡೂರು ಯಕ್ಷಗಾನ ಮೇಳದ ವತಿಯಿಂದ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಸಿ.ಎನ್‌.ಬಿಲ್ಲವ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ರವೀಂದ್ರ ಶೆಟ್ಟಿ ಹೊಸ್ಮನೆ ಯವರನ್ನು ಶಿರೂರಿನ ಯಕ್ಷ ಸಂಘಟಕರ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್‌ ಶೆಟ್ಟಿ,ಸಾಹಿತಿ ಡಾ.ಶ್ರೀನಿವಾಸ ಶೆಟ್ಟಿ, ಉದ್ಯಮಿ ರಘುರಾಮ ಕೆ.ಪೂಜಾರಿ,ಶಿರೂರು ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಪತ್ರಕತ೯ ಅರುಣ್ ಕುಮಾರ್ ಶಿರೂರು, ರವೀಂದ್ರ ಶೆಟ್ಟಿಹೊನ್ಕೇರಿ ಉಪಸ್ಥಿತರಿದ್ದರು.

ಯಕ್ಷ ಸಂಘಟಕ ದೀಪಕ್‌ ಕುಮಾರ್‌ ಶೆಟ್ಟಿಕರಾವಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಾಧವ ಬಿಲ್ಲವ ಕಾಳನಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Leave a Reply

Your email address will not be published. Required fields are marked *

one + 13 =