ಬೈಂದೂರು: ಕಳೆದ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಬೈಂದೂರು ವ್ಯಾಪ್ತಿಯಲ್ಲಿ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರವಿರಾಜ್ ಡೆಂಟಲ್ ಕ್ಲಿನಿಕ್ ಮನೀಷ್ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸ್ಕ್ಯಾನಿಂಗ್ ಸೆಂಟರ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಬೈಂದೂರಿನಲ್ಲಿ ಆರೋಗ್ಯ ಕಾಳಜಿ ದೃಷ್ಟಿಯಿಂದ ಇಂತಹ ಪ್ರಯತ್ನ ಶ್ಲಾಘನೀಯವಾಗಿದೆ.ಹುಟ್ಟೂರಿನಲ್ಲಿ ಜನ ಸೇವೆ ಮಾಡುವ ಅವಕಾಶ ಸಿಗುವುದು ವಿರಳ.ಇರುವ ಅವಕಾಶದಲ್ಲಿ ಪರಿಪೂರ್ಣತೆಯಿದ್ದಾಗ ಜನರ ಪ್ರೀತಿ ಹೆಚ್ಚುತ್ತದೆ ಡಾ.ಅನಿಲ್ ಶೆಟ್ಟಿ ಯವರು ನೂತನವಾಗಿ ಆರಂಭಿಸಿದ ಹೈಟೆಕ್ ದಂತ ಚಿಕಿತ್ಸಾ ಆಸ್ಪತ್ರೆ ಬೈಂದೂರಿನ ಕೀರ್ತಿ ಇನ್ನಷ್ಟು ಹೆಚ್ಚಿಸಲಿದೆ ಎಂದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ನೂತನ ರವಿರಾಜ್ ಡೆಂಟಲ್ ಕ್ಲಿನಿಕ್‌ನ್ನು ಉದ್ಘಾಟಿಸಿ ಮಾತನಾಡಿ ಬೆಳೆಯುತ್ತಿರುವ ಬೈಂದೂರಿನಲ್ಲಿ ಇಂತಹ ಆಧುನಿಕ ಆಸ್ಪತ್ರೆಗಳು ಅತ್ಯವಶ್ಯಕವಾಗಿದೆ.ಪಟ್ಟಣ ಭಾಗದಲ್ಲಿ ಸಿಗುವ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಭಾಗದಲ್ಲಿ ನೀಡುವ ಪ್ರಯತ್ನ ಉತ್ತಮ ಕಾರ್ಯವಾಗಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಡಾ.ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.






ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಬಿ.ಆರ್,ಡಾ.ಎಮ್.ಎಸ್.ಶೆಟ್ಟಿ, ಹಿರಿಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಕಟ್ಟಡದ ಮಾಲಕ ವೆಂಕಟರಮಣ ಬಿಜೂರು,ನಿತಿನ್ ಶೆಟ್ಟಿ ಬೈಂದೂರು, ಸುಧಾಕರ ಆಚಾರ್ಯ ತ್ರಾಸಿ, ಆನಂದ ಶೆಟ್ಟಿ ನಾಕಟ್ಟೆ, ಆಗಸ್ತೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಆಡಳಿತ ಮೊಕ್ತೇಸರ ಪ್ರದೀಪ ಕುಮಾರ್ ಶೆಟ್ಟಿ ಮೊಲದಾದವರು ಉಪಸ್ಥಿತರಿದ್ದರು.
ದಿನೇಶ ಆಚಾರ್ಯ ಉಳ್ಳೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ವಂದಿಸಿದರು.
ವರದಿ/ಗಿರಿ ಶಿರೂರು