ಬೈಂದೂರು: ಬೈಂದೂರು ತಾಲೂಕಿನ ಕೊರಾಡಿ ಭಾಗದಲ್ಲಿ ಹಾಡುಹಗಲೇ ಹುಲಿ ಕಾಟ ಆರಂಭವಾಗಿದೆ.ಮಂಗಳವಾರ ಇಲ್ಲಿನ ರಸ್ತೆ ಬದಿಯಲ್ಲಿ ದನದ ಮೇಲೆ ಆಕ್ರಮಣ ಮಾಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಗ್ರಾಮೀಣ ಭಾಗವಾದ ಕಾರಣ ಪ್ರತಿವರ್ಷ ಅಲ್ಲಲ್ಲಿ ಜಾನುವಾರುಗಳನ್ನು ಕೊಂದು ತಿನ್ನುತ್ತಿದ್ದು ಈ ವರ್ಷ ಹಗಲು ವೇಳೆ ಆಕ್ರಮಣ ಮಾಡಿದೆ.ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
