ಬೈಂದೂರು,ನ.12: ಕರಾವಳಿ ಭಾಗದ ಬಹುದಿನದ ಕನಸು ಸಾಕಾರಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯಾದ ವಂದೆ ಭಾರತ್ ಎಕ್ಸಪ್ರೆಸ್ ರೈಲು ಬೆಂಗಳೂರು – ಮಡಗಾಂವ್ ಸಂಚಾರ ನಾಳೆಯಿಂದ ಆರಂಭ ಮಾಡಲಿದ್ದು ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ರೈಲ್ವೆ ಯಾತ್ರಿ ಸಂಘದ ವತಿಯಿಂದ ಅದ್ದೂರಿ ಸ್ವಾಗತಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅದ್ಯಕ್ಷ ಜಯಾನಂದ ಹೋಬಳಿದಾರ ಹೇಳಿದರು ಅವರು ಗುರುವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಕರಾವಳಿ ಸಂಸರು ಹಾಗೂ ಸಚಿವರ ಪ್ರಯತ್ನದಿಂದ ಈ ಮಹತ್ವದ ಯೋಜನೆ ಜಾರಿಯಾಗಿದೆ.
ಶುಕ್ರವಾರ ರಾತ್ರಿ 11 ಗಂಟೆಗೆ ವಂದೇ ಭಾರತ್ ರೈಲು ಬೈಂದೂರಿಗೆ ಆಗಮಿಸಲಿದ್ದು ಸಂಸದರು ಹಾಗೂ ಶಾಸಕರ ಮುಂದಾಳತ್ವದಲ್ಲಿ ಸ್ವಾಗತಿಸಲಾಗುವುದು ಹಾಗೂ ಸಂಸದರಿಗೆ ಬೈಂದೂರು ಜನತೆಯ ಸಾರ್ವಜನಿಕ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಬೈಂದೂರು ರೈಲ್ವೆ ನಿಲ್ದಾಣದಿಂದ ಕೊಲ್ಲೂರು ಸಮೀಪದಲ್ಲಿದ್ದು ಹೊಸ ಹೆದ್ದಾರಿ ನಿರ್ಮಾಣವಾದ ಬಳಿಕ ಅಂತರ ಇನ್ನಷ್ಟು ಕಡಿಮೆಯಾಗಲಿದೆ ಕೊಲ್ಲೂರಿಗೆ ಬರುವ ಯಾತ್ರಾದಿಗಳಿಗೆ ಸಾಕಷ್ಟು ಅನೂಕೂಲವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಪ್ರಕಾಶ ಪೂಜಾರಿ,ಶಂಕರ್ ಶೇರುಗಾರ್,ಭೀಮೇಶ್ ಕುಮಾರ್,ನಾಗರಾಜ ಶೇಟ್,ವಿಜಯ ಪೂಜಾರಿ ಹಾಜರಿದ್ದರು.
