ಶಿರೂರು: ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇಂಡಿಯಾ,ಜೆಸಿಐ ಶಿರೂರು ಇದರ ಜೇಸಿ ಸಂಭ್ರಮ -2022 ಕಾರ್ಯಕ್ರಮ ನ.7, 8, 9 ರಂದು ಸಂಜೆ ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ.ನ.7 ರಂದು ಮುದ್ದುಕೃಷ್ಣ ಸ್ಪರ್ಧೆ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ,ನ.8 ರಂದು ಜೆಸಿಐ ಕಲಾ ಸಂಸ್ಥೆಯ ಸದಸ್ಯರಿಂದ ಪಾಪಣ್ಣ ವಿಜಯ ಗುಣ ಸುಂದರಿ ಮಹಿಳಾ ಯಕ್ಷ ವೈಭವ ನಡೆಯಲಿದೆ.ನ.9 ರಂದು ಮೂರು ಮುತ್ತು ಖ್ಯಾತಿಯ ಕಲಾವಿದರಿಂದ ಕಾಮಿಡಿ ದರ್ಬಾರ್ ಪ್ರದರ್ಶನಗೊಳ್ಳಲಿದೆ ಎಂದು ಶಿರೂರು ಜೆಸಿಐ ಅಧ್ಯಕ್ಷ ಸುರೇಶ್ ಮಾಕೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

7 + one =