ಬೈಂದೂರು: ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಅಕ್ಟೋಬರ್ 30 ರಂದು ಉಪ್ಪುಂದ ನಂದನವನ ಹಾಸ್ಪಿಟಾಲಿಟಿ ಮತ್ತು ಸರ್ವಿಸಸ್ ಇದರ ವತಿಯಿಂದ ಉಪ್ಪುಂದ ದೇವಕಿ ಸಭಾಭವನದಲ್ಲಿ ಬ್ರಹತ್ ಉದ್ಯೋಗ ಮೇಳ ಮತ್ತು ಅಭಾ -ಅಯುಷ್ಮಾನ್ ಕಾರ್ಡ್ ಉಚಿತ ನೊಂದಣಿ ಶಿಬಿರ ಕಾರ್ಯಕ್ರಮ ನಡೆಯಲಿದೆ ಎಂದು ಉಪ್ಪುಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 2,400ಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ಯೋಗ ಮೇಳಕ್ಕೆ ಈಗಾಗಲೇ ನೊಂದಣಿ ಮಾಡಿಕೊಂಡಿದ್ದು ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ವಿವಿಧ ಸಂಸ್ಥೆಯ ಸಂದರ್ಶನಗಳನ್ನು ಎದುರಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದು.ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.ಇದರಲ್ಲಿ ಸಾವಿರದ ಐನೂರು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ಶ್ರಮಿಸಲಾಗುವುದು ಎಂದರು.ಇನ್ಪೋಸಿಸ್,ಐಬಿಎಂ,ಎಲ್.ಜಿ,ಅಮೆಜಾನ್,ಪ್ಲಿಪ್‌ಕಾರ್ಟ್,ಟೊಯೊಟೋ,ಹೊಂಡಾ ಮೂವತ್ತಕ್ಕೂ ಅಧಿಕ ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪ್ರಮಾಣ ಪತ್ರ ನೀಡಲಾಗುವುದು.ಕೌಟಂಬಿಕ ಸಮಸ್ಯೆ ಸಹಿತ ನಾನಾ ಕಾರಣಕ್ಕೆ ಬೇರೆ ಊರುಗಳಿಗೆ ಹೋಗಿ ಉದ್ಯೋಗ ಮಾಡಲು ಸಾಧ್ಯವಾಗದ ಅರ್ಹ ಯುವತಿಯರಿಗೆ ವರ್ಕ್‌ಪ್ರಮ್ ಹೋಂ ವ್ಯವಸ್ಥೆ ಬಗ್ಗೆ ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ.ಪಿ.ಯು.ಸಿ ಉತ್ತಿರ್ಣರಾದ ಅಭ್ಯರ್ಥಿಗಳು,ಪದವಿ,ಸ್ನಾತಕೋತ್ತರ ಪದವಿ ಹೊಂದಿರುವವರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುವುದು.ಶೈಕ್ಷಣಿಕ ಅರ್ಹತೆಯ ದೃಡೀಕೃತ ಪ್ರತಿ,ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,ಆಧಾರ್ ಕಾರ್ಡ್ ಹಾಗೂ ಸ್ವ-ವಿವರ ತೆಗೆದುಕೊಂಡು ಬರಬೇಕು.ಗ್ರಾಮ ಒನ್ ಬೈಂದೂರು ವಲಯದ ಸಹಯೋಗದಲ್ಲಿ ಅದೇ ದಿನ ನಡೆಯುವ ಅಭಾ-ಅಯುಷ್ಮಾನ್ ಕಾರ್ಡ್ ಉಚಿತ ನೊಂದಣಿ ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್,ರೇಷನ್ ಕಾರ್ಡ್,ಆಧಾರ್ ಲಿಂಕ್ ಮೊಬೈಲ್ ನಂಬರ್ ನೊಂದಿಗೆ ಬರಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸುರಭಿ ಬಂದೂರು ಅಧ್ಯಕ್ಷ ನಾಗರಾಜ್ ಯಡ್ತರೆ,ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿಯ ಮುಖ್ಯಸ್ಥ ಸತ್ಯನಾರಾಯಣ ಗಾಣಿಗ ಹಾಜರಿದ್ದರು.