ಬೈಂದೂರು; ಕರ್ನಾಟಕ ಜನಪದ ಪರಿಷತ್ತು ಯು.ಎ.ಇ ಘಟಕ ಇದರ ವತಿಯಿಂದ ಅಂತರಾಷ್ಟ್ರೀಯ ಜನಪದ ಉತ್ಸವ-2025 ಸೆ.06 ಮತ್ತು 07 ರಂದು ದುಬೈನಲ್ಲಿ ನಡೆಯಲಿದೆ ಎಂದು ಯು.ಎ.ಇ ಘಟಕದ ಅಧ್ಯಕ್ಷ ಸಾಧನದಾಸ್ ತಿಳಿಸಿದ್ದಾರೆ.ಜನಪದ ಉತ್ಸವದ ಪ್ರಯುಕ್ತ ದುಬೈ ಪ್ರವಾಸಕ್ಕೆ ಅನುಕೂಲವಾಗುವಂತೆ ಎಸ್.ಎನ್ ಟೂರ್‍ಸ್ ಆಂಡ್ ಟ್ರಾವೆಲ್ಸ್ ವಿಶೇಷ ಪ್ಯಾಕೇಜ್ ನೀಡಿದೆ.5 ದಿನ ಹಾಗೂ 4 ರಾತ್ರಿ ದುಬೈ ಪ್ರವಾಸ, ಐಶಾರಾಮಿ ಹೊಟೇಲ್ ವ್ಯವಸ್ಥೆ, ದುಬೈ ಪ್ರವಾಸ ಸ್ಥಳ ವೀಕ್ಷಣೆ ಸೇರಿದಂತೆ ಹಲವು ಸೌಲಭ್ಯಗಳನ್ನು 73,500 ರೂಪಾಯಿಯಲ್ಲಿ ನೀಡಲಿದೆ.ಆಸಕ್ತರು ಮುಂಗಡ ಬುಕ್ಕಿಂಗ್‌ಗಾಗಿ ಪ್ರಶಾಂತ ಆಚಾರ್ಯ 7899161241 ಸಂಪರ್ಕಿಸಬಹುವುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

seventeen − ten =

You missed