ಶಿರೂರು; ಬುಧವಾರ ಮುಂಜಾನೆ ಬೀಸಿದ ಗಾಳಿ ಮಳೆಗೆ ಶಿರೂರು ಗ್ರಾಮದ ಕೋಟೆಮನೆ ಶ್ರೀಧರ ಮೇಸ್ತ ಇವರ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ.ಬುಧವಾರ ಬೆಳಗಿನ ಜಾವ ಶಿರೂರು ಭಾಗದಲ್ಲಿ ವಿಪರೀತ ಗಾಳಿ ಬೀಸಿದ್ದು ಕೊಟ್ಟಿಗೆ ಮುರಿದು ಬಿದ್ದು ಸುಮಾರು 50,000 ಅಧಿಕ ನಷ್ಟ ಉಂಟಾಗಿದೆ.ಸ್ಥಳಕ್ಕೆ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.